ಮಂಗಳೂರು: ಎಂಸಿಸಿ ಬ್ಯಾಂಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್
ಮಂಗಳೂರು, ಎ.23: ನಗರದ ಹಂಪನಕಟ್ಟೆ ಬಳಿಯಲ್ಲಿರುವ ಎಂಸಿಸಿ (ಮಂಗಳೂರು ಕೆಥೋಲಿಕ್ ಕೋ-ಆಪರೇಟಿವ್) ಬ್ಯಾಂಕ್‌ನಲ್ಲಿ ವಿದ್ಯುತ್ ವಯರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ದಟ್ಟ ಹೊಗೆ ಕಾಣಿಸಿದ್ದು, ಇದರಿಂದ ಕಚೇರಿ ಯೊಳಗಿದ್ದ ಸಿಬ್ಬಂದಿ ಹಾಗೂ ಗ್ರಾಹಕರು ತೀವ್ರ ಗಾಬರಿಗೊಳಗಾದ ಘಟನೆ ಶುಕ್ರವಾರ ನಡೆದಿದೆ.
ತಕ್ಷಣ ಸಿಬ್ಬಂದಿಯು ಬೆಂಕಿ ಶಮನಕ್ಕೆ ಪ್ರಯತ್ನಿಸಿದ್ದಾರೆ. ಈ ಮಧ್ಯೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನಿಡಲಾಯಿತು. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕದಳದ ಸಿಬ್ಬಂದಿ ವರ್ಗವು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಅನಾಹುತದಿಂದ ಯಾರಿಗೂ ಗಾಯವಾಗಿಲ್ಲ, ಯಾವುದೇ ಸೊತ್ತುಗಳಿಗೆ ಹಾನಿಯಾಗಿಲ್ಲ. ಕಚೇರಿಯಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಗ್ರಾಹಕರನ್ನು ಹೊರಗೆ ಕಳುಹಿಸಲಾಯಿತು. ಎಲ್ಲ ದಾಖಲೆಗಳು, ಚಿನ್ನಾಭರಣ, ಕಂಪ್ಯೂಟರ್‌ಗಳು, ಪೀಠೋಪಕರಣಗಳು ಸುರಕ್ಷಿತವಾಗಿವೆ. ಗ್ರಾಹಕರು ಗಾಬರಿಪಡಬೇಕಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗವು ಕಾರ್ಯಾಚರಣೆ ನಡೆಸಿ ಕಿಟಕಿ ಬಾಗಿಲುಗಳನ್ನು ಒಡೆದು ಕಚೇರಿಯೊಳಗೆ ತುಂಬಿದ್ದ ಹೊಗೆಯನ್ನು ಹೊರ ಬಿಟ್ಟಿದ್ದಾರೆ. ಬ್ಯಾಂಕ್‌ನ ಸುರಕ್ಷತೆಗೆ ಮತ್ತಷ್ಟು ಆದ್ಯತೆ ನೀಡಲಾಗುವುದು ಎಂದು ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.