ಕಾಸರಗೋಡು : ಎ.24, 25ರಂದು ತುರ್ತು ಸೇವೆಗಳಿಗೆ ಮಾತ್ರ ಅನುಮತಿ
ಕಾಸರಗೋಡು : ಕೋವಿಡ್ ಸೋಂಕು ನಿಯಂತ್ರಣದ ಹಿನ್ನಲೆಯಲ್ಲಿ ಎ.24, 25ರಂದು ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಿ ರಾಜ್ಯ ಮುಖ್ಯ ಕಾರ್ಯದರ್ಶಿ ಯವರು ಮಾರ್ಗ ಸೂಚಿ ಹೊರಡಿಸಿದ್ದಾರೆ.
ಎ.24ರಂದು ಸರಕಾರಿ ಬಸ್ಸು , ಬ್ಯಾಂಕ್ , ಸಾರ್ವಜನಿಕ ಸಂಸ್ಥೆಗಳು , ಸಹಕಾರಿ ಸಂಸ್ಥೆಗಳು ಮೊದಲಾದವುಗಳಿಗೆ ರಜೆ ನೀಡಲಾಗಿದೆ. ವಿವಾಹ ಇನ್ನಿತರ ಶುಭ ಸಮಾರಂಭಗಳನ್ನು ಕೋವಿಡ್ ಜಾಗ್ರತಾ ಪೋರ್ಟಲ್ ನಲ್ಲಿ ನೋಂದಾಯಿಸಬೇಕು. ನೋಂದಾಯಿಸಿದವರಿಗೆ ಮಾತ್ರ ವಿವಾಹ ಹಾಗೂ ಶುಭ ಸಮಾರಂಭ ಗಳಿಗೆ ಅನುಮತಿ ನೀಡಲಾಗುವುದು.
1. ಕೋವಿಡ್ ನಿಯಂತ್ರಣಕ್ಕೆ ಸಂಬಂಧಪಟ್ಟ ಕೇಂದ್ರ -ರಾಜ್ಯ ಸರಕಾರಿ ಕಚೇರಿಗಳು , ಸ್ಥಳೀಯಾಡಳಿತ ಸಂಸ್ಥೆಗಳು ತೆರೆದು ಕಾರ್ಯಾಚರಿಸಲಿದೆ.
2. ಟೆಲಿಕಾಂ , ಇಂಟರ್ ನೆಟ್ ಸೇವೆಗಳ ಸಿಬಂದಿ ಹಾಗೂ ವಾಹನಗಳಿಗೆ ಸಂಸ್ಥೆಯ ಗುರುತು ಚೀಟಿ ತೋರಿಸಿದ್ದಲ್ಲಿ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು .
3. ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳು ಹಾಗೂ ಸಹಾಯಕರು , ಸಂಬಂಧಿಕರು ದಾಖಲಾತಿ ಪತ್ರಗಳನ್ನು ತೋರಿಸಿದರೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು .
4. ವ್ಯಾಕ್ಸಿನೇಷನ್ ಪಡೆಯುವವರು ಯುವುದಾದರೂ ಗುರುತು ಚೀಟಿ ತೋರಿಸಿದರೆ ಪ್ರಯಾಣಕ್ಕೆ ಅನುಮತಿ
5. ಆಹಾರ ವಸ್ತು , ಹಣ್ಣು , ತರಕಾರಿ , ಹಾಲು , ಮಾಂಸ , ಮೀನು ಇತ್ಯಾದಿ ಮಾರಾಟ ಅಂಗಡಿಗಳು ಮಾತ್ರ ತೆರೆಯಬಹುದು. ಹೋಂ ಡೆಲಿವರಿ ಗೆ ಒತ್ತುನೀಡಬೇಕು . ಇದರಿಂದ ಜನರು ಹೆಚ್ಚಾಗಿ ಮನೆಯಿಂದ ಹೊರಬಾರದಂತೆ ತಡೆಯಬೇಕು.
6. ಹೋಟೆಲ್ , ರೆಸ್ಟೋರೆಂಟ್ ಗಳಲ್ಲಿ ಹೋಂ ಡೆಲಿವರಿ ಹಾಗೂ ಪಾರ್ಸೆಲ್ ಗೆ ಮಾತ್ರ ಅನುಮತಿ ನೀಡಲಾಗುವುದು
7. ದೀರ್ಘದೂರದ ಬಸ್ಸುಗಳು , ರೈಲು , ಬಸ್ಸು , ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಖಾಸಗಿ ವಾಹನಗಳಿಗೆ ಅನುಮತಿ. ಪ್ರಯಾಣಿಕರು ಟಿಕೆಟ್ ಸೇರಿದಂತೆ ಪ್ರಯಾಣ ದಾಖಲೆಗಳನ್ನು ಇರಿಸಿಕೊಳ್ಳಬೇಕು .
8 . ಕೋವಿಡ್ ಜಾಗ್ರತಾ ಪೋರ್ಟಲ್ ನಲ್ಲಿ ಮುಂಗಡ ನೋಂದಣಿ ಮಾಡಿದ ವಿವಾಹ , ಗ್ರಹಪ್ರವೇಶ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ.