ಕೊರೋನ; ಸರ್ಕಾರ ದಿನಕ್ಕೊಂದು ಸುತ್ತೋಲೆ ಹೊರಡಿಸಿ ಜನರನ್ನು ದಾರಿ ತಪ್ಪಿಸುತ್ತಿದೆ: ಅಬ್ದುಲ್ ರಶೀದ್ ಆರೋಪ

Update: 2021-04-23 16:50 GMT

ಉಳ್ಳಾಲ : ಕೊರೊನ ಎರಡನೇ ಅಲೆ ಗೆ ಸಂಬಂಧಿಸಿ ಸರ್ಕಾರ ದಿನಕ್ಕೊಂದು ಸುತ್ತೋಲೆ ಗಳನ್ನು ಹೊರಡಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಆರೋಪಿಸಿದ್ದಾರೆ.

ವಾರ್ತಾ ಭಾರತಿ ಜೊತೆ ಮಾಹಿತಿ ಹಂಚಿಕೊಂಡ ಅವರು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಹಿತ ಅನೇಕ ನಾಯಕರು ಕೊರೊನ ಬಾಧಿತರಾಗುವುದು ಕೊರೊನ ವ್ಯಾಪಕವಾಗಿ ಹರಡಿಲ್ಲ ಎಂಬ ಹೇಳಿಕೆಗೆ ಪರ್ಯಾಯ ವಾಗಿದೆ. ಜನ ಸಾಮಾನ್ಯರು ಮಾಸ್ಕ್ ಧರಿಸಿ ಅಂತರ ಕಾಪಾಡುವುದರ ಮೂಲಕ ಕೊರೊನ ವಿರುದ್ಧ ಹೋರಾಟಕ್ಕೆ ಕೈಜೋಡಿಸುವುದು ಅತೀ ಅಗತ್ಯ. ಕೊರೊನ ಬಗೆ ಭೀತಿ ಹುಟ್ಟಿಸದೇ ಎಚ್ಚರವಾಗಿರಿ ಎಂದು ಸಂದೇಶ ನೀಡಬೇಕಾಗಿದೆ. ಬದಲಾಗಿ ಸಾವಿರಾರು ಜನರಿಗೆ ಪೊಸಿಟಿವ್, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಲಭ್ಯ, ಬೆಡ್ ಗಳ ಕೊರತೆ, ಆಂಬುಲೆನ್ಸ್ ಗಾಡಿ ಪರದಾಟ ಮುಂತಾದ ಹೇಳಿಕೆ ನೀಡದೇ ಜನರಲ್ಲಿ ಧೈರ್ಯ ತುಂಬುವ ಕೆಲಸ  ಮಾಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News