×
Ad

ಲಸಿಕೆಗೆ ಏಕರೂಪದ ಬೆಲೆ ನಿಗದಿಗೆ ಉತ್ಪಾದಕರೊಂದಿಗೆ ರಾಜ್ಯಗಳು ಜಂಟಿ ಮಾತುಕತೆ ನಡೆಸಬೇಕು: ಚಿದಂಬರಂ

Update: 2021-04-24 00:07 IST

ಹೊಸದಿಲ್ಲಿ, ಎ. 23: ಕೊರೋನ ಲಸಿಕೆಗೆ ವಿವಿಧ ಬೆಲೆ ನಿಗದಿಪಡಿಸಲು ಅನುಮತಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ‘ತಾರತಮ್ಯ’ ಎಂದು ಶುಕ್ರವಾರ ವ್ಯಾಖ್ಯಾನಿಸಿರುವ ಕಾಂಗ್ರೆಸ್ನ ಹಿರಿಯ ನಾಯಕ ಚಿದಂಬರಂ, ಏಕರೂಪ ಬೆಲೆ ನಿಗದಿ ಪಡಿಸುವ ಬಗ್ಗೆ ಉತ್ಪಾದಕರೊಂದಿಗೆ ಮಾತುಕತೆ ನಡೆಸಲು ರಾಜ್ಯಗಳು ಜಂಟಿಯಾಗಿ ಬೆಲೆ ಮಧ್ಯಸ್ಥಿಕೆ ಸಮಿತಿ ರೂಪಿಸಲಿ ಎಂದು ಸಲಹೆ ನೀಡಿದ್ದಾರೆ.

ಕೇಂದ್ರ ಸರಕಾರ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಹಾಗೂ ಲಾಭ ಮಾಡಿಕೊಳ್ಳುತ್ತಿರುವ ಬಂಡವಾಳಶಾಹಿಗೆ ಶರಣಾಗಿದೆ ಎಂದು ಚಿದಂಬರಂ ಆರೋಪಿಸಿದ್ದಾರೆ.

‘‘ಕೊರೋನ ಲಸಿಕೆಗಳಿಗೆ ವಿವಿಧ ಬೆಲೆ ನಿಗದಿಪಡಿಸಲು ಅವಕಾಶ ನೀಡುವ ಕೇಂದ್ರ ಸರಕಾರದ ನಿರ್ಧಾರ ‘ತಾರತಮ್ಯ ಹಾಗೂ ತಿರೋಗಾಮಿಯಾದುದು. ಈ ನಿರ್ಧಾರಗಳನ್ನು ರಾಜ್ಯಗಳು ಒಮ್ಮತದಿಂದ ತಿರಸ್ಕರಿಸಬೇಕು. ನಮ್ಮ ಮುಂದಿರುವ ಉತ್ತಮ ದಾರಿಯೆಂದರೆ, ರಾಜ್ಯ ಸರಕಾರಗಳು ಬೆಲೆ ಮಧ್ಯಸ್ಥಿಕೆ ಸಮಿತಿ ರೂಪಿಸಬೇಕು ಹಾಗೂ ಎರಡು ಲಸಿಕೆ ಉತ್ಪಾದಕರೊಂದಿಗೆ ಏಕರೂಪದ ಬೆಲೆಗೆ ಮಧ್ಯಸ್ಥಿಕೆ ನಡೆಸಲು ಆಹ್ವಾನಿಸಬೇಕು’’ ಎಂದು ಚಿದಂಬರಂ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

‘‘ರಾಜ್ಯ ಸರಕಾರಗಳ ಜಂಟಿ ಖರೀದಿ ಶಕ್ತಿಯು ಲಸಿಕೆ ಉತ್ಪಾದಕರು ಏಕರೂಪದ ಬೆಲೆಗೆ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತದೆ’’ ಎಂದು ಚಿದಂಬರಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News