×
Ad

ವೀಕೆಂಡ್ ಕರ್ಫ್ಯೂ : ಮಂಗಳೂರು ನಗರ ಬಹುತೇಕ ಸ್ತಬ್ಧ

Update: 2021-04-24 09:08 IST

ಮಂಗಳೂರು : ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ‌ಇಂದು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

ನಗರದ ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ಮಾರುಕಟ್ಟೆಗಳು, ಸೂಪರ್ ಮಾರುಕಟ್ಟೆಗಳು ತೆರೆದಿವೆ. ಆದರೆ ಗ್ರಾಹಕರ ಸಂಖ್ಯೆ  ತೀರಾ ವಿರಳವಾಗಿದೆ.

ಹೆದ್ದಾರಿ ಸೇರಿದಂತೆ ಒಳರಸ್ತೆಗಳಲ್ಲೂ ಬೆರಳೆಣಿಕೆಯ ವಾಹನಗಳು  ಸಂಚರಿಸುತ್ತಿವೆ. ಜನರು ಬಹುತೇಕವಾಗಿ ನಿನ್ನೆಯೇ ಆಹಾರ ಸಾಮಗ್ರಿಗಳ ಖರೀದಿ ಮುಗಿಸಿದ್ದರಿಂದ ಇಂದು ಅಂಗಡಿಗಳೆದುರು ಸರತಿ ಸಾಲು ಕಾಣದಾಗಿದೆ.

ಮಂಗಳೂರಿನ ಜೈಲ್ ರೋಡ್ ನಲ್ಲಿರುವ ಹಾಲಿನ ಡೈರಿಯೊಂದರ ಎದುರು ಬೆರಳೆಣಿಕೆಯ ಮಂದಿ ಶಿಸ್ತು ಬದ್ದವಾಗಿ ಸುರಕ್ಷಿತ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ಹಾಲು ಖರೀದಿಸುವುದು ಕಂಡು ‌ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News