×
Ad

ಗೂಡಿನಬಳಿ ನೇತ್ರಾವತಿ ನದಿಗೆ ಹಾರಿದ ಯುವಕನ ರಕ್ಷಣೆ

Update: 2021-04-24 11:14 IST

ಬಂಟ್ವಾಳ: ತಾಲೂಕಿನ ಗೂಡಿನಬಳಿ ಸಮೀಪ ನೇತ್ರಾವತಿ ನದಿಗೆ ಹಾರಿದ ಯುವಕನೊಬ್ಬನನ್ನು ರಕ್ಷಣೆ ಮಾಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಗೂಡಿನಬಳಿಯ ಸತ್ತಾರ್ ಮತ್ತವರ ಸ್ನೇಹಿತ ಸಾದಿಕ್ ಎಂಬವರು ನದಿಗೆ ಹಾರಿದ ಯುವಕನನ್ನು ರಕ್ಷಿಸಿ ಜೀವ ಉಳಿಸಿದ್ದಾರೆ. 

ಸಂಜೆ ಮನೆಗೆ ತೆರಳುವ ಸಂದರ್ಭದಲ್ಲಿ ಸ್ಥಳೀಯ ಹುಡುಗರು ಯುವಕನೊಬ್ಬ ನದಿಗೆ ಹಾರಿದ ವಿಚಾರವನ್ನು ತಿಳಿಸಿದ್ದು ಕೂಡಲೇ ಸಾದಿಕ್ ಎಂಬವರ ಸಹಾಯದಿಂದ ಆತನನ್ನು ರಕ್ಷಿಸಲಾಗಿದೆ. ನದಿಗೆ ಹಾರಿದ ಯುವಕ ತನ್ನ ಮೊಬೈಲನ್ನು ಸೇತುವೆಯಲ್ಲಿ ಇಟ್ಟು ಹಾರಿದ್ದರಿಂದ ಮೊಬೈಲ್‌ನ ಸಹಾಯದಿಂದ ಆತನ ಮನೆಯವರನ್ನು ಸಂಪರ್ಕಿಸಿ ಮನೆಯವರ ಜೊತೆ ಕಳುಹಿಸಿ ಕೊಡಲಾಯಿತು ಎಂದು ಸತ್ತಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News