ಬಜ್ಪೆ: ಎಂಎಸ್‌ಇಝೆಡ್ ಕಂಪೆನಿಯಲ್ಲಿ ಅಗ್ನಿ ಅನಾಹುತ
Update: 2021-04-24 15:29 IST
ಮಂಗಳೂರು, ಎ.24: ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ ಎಂಎಸ್‌ಇಝೆಡ್ ವ್ಯಾಪ್ತಿಯೊಳಗಿರುವ ಕ್ಯಾಟಸಿಂತ್ ಸ್ಪೆಷಾಲಿಟಿ ಕೆಮಿಕಲ್ಸ್ ಪ್ರೈವೆಟ್ ಲಿ. ಎಂಬ ಹೆಸರಿನ ನೂತನ ಸುಗಂಧ ದ್ರವ್ಯ ತಯಾರಿ ಕಂಪೆನಿಯಲ್ಲಿ ಶನಿವಾರ ಅಪರಾಹ್ನ ಅಗ್ನಿ ಅನಾಹುತ ಸಂಭವಿಸಿದೆ.
ಈ ಸಂದರ್ಭ ಕಂಪೆನಿಯಲ್ಲಿ ಕೆಲಸಗಾರರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಇದರಿಂದ ಪರಿಸರದಲ್ಲಿ ದಟ್ಟ ಹೊಗೆ ಕಾಣಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದು, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.