​ಬೈಕ್ ಢಿಕ್ಕಿ: ಲೂನಾ ಸವಾರ ಮೃತ್ಯು

Update: 2021-04-24 13:58 GMT

ಮಲ್ಪೆ, ಎ. 24: ಬೈಕೊಂದು ಲೂನಾಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಕಿದಿಯೂರು ಮಜ್ಜಗೆಪಾದೆ ಸೇತುವೆ ಬಳಿ ಎ.24ರಂದು ಬೆಳಗ್ಗೆ 7ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಕಿದಿಯೂರು ಮಜ್ಜಿಗೆಪಾದೆ ನಿವಾಸಿ ಶಶಿಧರ ಪೂಜಾರಿ(52) ಎಂದು ಗುರುತಿಸಲಾಗಿದೆ. ಇವರು ಮನೆಯಿಂದ ಅಂಬಲಪಾಡಿಗೆ ಹೋಗು ತ್ತಿದ್ದಾಗ ಟಿಎವಿಎಸ್ ಲೂನಾಗೆ ಅಂಬಲಪಾಡಿ ಕಡೆಯಿಂದ ಕಿದಿಯೂರು ಕಡೆಗೆ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತು. ಇದರಿಂದ ಲೂನಾ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಶಶಿಧರ್, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News