×
Ad

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ರಕ್ತಕ್ಕೆ ಕೊರತೆ : ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮನವಿ

Update: 2021-04-24 20:02 IST

ಉಡುಪಿ, ಎ.24: ಕೇಂದ್ರ ಸರಕಾರದ ವತಿಯಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋರೋನ ಲಸಿಕೆಯನ್ನು ಮೇ 1ರಿಂದ ನೀಡಲು ನಿರ್ಧರಿಸಲಾಗಿದೆ. ಆದರೆ ಸರಕಾರದ ಮಾರ್ಗಸೂಚಿಯಂತೆ ಲಸಿಕೆ ಪಡೆದ 28 ದಿನ ರಕ್ತದಾನ ಮಾಡುವಂತಿಲ್ಲ. ಆದ್ದರಿಂದ ಲಸಿಕೆ ಪಡೆದ ಸುಮಾರು 2-3 ತಿಂಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ.

ಈ ಸಮಯದಲ್ಲಿ ಆಸ್ಪತ್ರೆಗೆ ಅವಶ್ಯವಿರುವಷ್ಟು ರಕ್ತದ ಸಂಗ್ರಹ ಆಗದೆ ಇರುವು ದರಿಂದ ಕೆಲವೊಂದು ಕಾಯಿಲೆಗಳಿಗೆ ಮತ್ತು ಅಪಘಾತ ಸಂದರ್ಭದಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವ ಪ್ರಮೇಯ ತಲೆದೂರಲಿದೆ. ರಕ್ತದಾನಿಗಳಲ್ಲಿ ಹೆಚ್ಚಿನವರು 18ರಿಂದ 40 ವರ್ಷದ ನಡುವಿನವರಾಗಿರುವುದರಿಂದ ರಕ್ತದ ತೀರ ಅಭಾವವಾಗಲಿದೆ ಎಂದು ಭಾವಿಸಲಾಗಿದೆ. ಆದ್ದರಿಂದ ಲಸಿಕೆ ಪಡೆಯುವ ಒಂದೆರಡು ದಿನದ ಮೊದಲು ನಿಮ್ಮ ಹತ್ತಿರದ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ರಕ್ತದಾನ ಮಾಡಿ ಅಮೂಲ್ಯ ಜೀವ ಗಳನ್ನು ಉಳಿಸಲು ಸಹಾಯ ಮಾಡು ವಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ವಿನಂತಿಸಿದ್ದಾರೆ. 10ಕ್ಕಿಂತ ಹೆಚ್ಚು ದಾನಿಗಳು ಇದ್ದರೆ, ಆಸ್ಪತ್ರೆಯ ವತಿಯಿಂದ ವಾಹನದ ವ್ಯವಸ್ಥೆ ಮಾಡಾಗು ವುದು ಎಂದವರು ತಿಳಿಸಿದ್ದಾರೆ.

ಆದ್ದರಿಂದ ಲಸಿಕೆ ಪಡೆಯುವ ಒಂದೆರಡು ದಿನದ ಮೊದಲು ನಿಮ್ಮ ಹತ್ತಿರದ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ರಕ್ತದಾನ ಮಾಡಿ ಅಮೂಲ್ಯ ಜೀವ ಗಳನ್ನು ಉಳಿಸಲು ಸಹಾಯ ಮಾಡುವಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ವಿನಂತಿಸಿದ್ದಾರೆ. 10ಕ್ಕಿಂತ ಹೆಚ್ಚು ದಾನಿಗಳು ಇದ್ದರೆ, ಆಸ್ಪತ್ರೆಯ ವತಿಯಿಂದ ವಾಹನದ ವ್ಯವಸ್ಥೆ ಮಾಡಲಾಗು ವುದು ಎಂದವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News