×
Ad

ಕಾಂಗ್ರೆಸ್‌ನಿಂದ ರಾಜೇಶ್ ಬಾಳೆಕಲ್ಲು ವಜಾ

Update: 2021-04-24 20:41 IST

ಮಂಗಳೂರು, ಎ. 24: ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ ಬಾಳೆಕಲ್ಲು ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗ್ರಾಪಂ ಸದಸ್ಯರೂ ಆಗಿರುವ ಇವರು ಕಳೆದ ಅನೇಕ ಸಮಯಗಳಿಂದ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಾ ಬಂದಿರುವುದಾಗಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾರ್ಯಕರ್ತರು ದೂರಿಕೊಂಡಿದ್ದರು. ಇತ್ತೀಚಿಗೆ ನಡೆದ ಗ್ರಾಪಂ ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿರುವುದಾಗಿಯೂ ಹಾಗೂ ಪಕ್ಷದ ನಾಯಕರನ್ನು ಅವಹೇಳನಕಾರಿಯಾಗಿ ನಿಂದಿಸುತ್ತಿರುವುದಾಗಿ ವರದಿಯಾಗಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಈ ವಿಚಾರವಾಗಿ ಪರಿಶೀಲಿಸಿದಾಗ ದೂರಿನಲ್ಲಿ ಸತ್ಯಾಸತ್ಯತೆ ಕಂಡು ಬಂದಿದೆ. ಹಾಗಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ರಾಜೇಶ ಬಾಳೆಕಲ್ಲು ಅವರನ್ನು ವಜಾ ಮಾಡಲಾಗಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News