ಭಾರತದಲ್ಲಿ ಆಕ್ಸಿಜನ್ ಕೊರತೆಯಿಂದಾಗಿರುವ ಮಾನವೀಯ ಬಿಕ್ಕಟ್ಟು ‘ಹೃದಯ ವಿದ್ರಾವಕ’: ಗ್ರೆಟಾ ಥನ್ ಬರ್ಗ್

Update: 2021-04-24 16:53 GMT

ಹೊಸದಿಲ್ಲಿ: ಭಾರತದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಉಂಟಾದ ಮಾನವೀಯ ಬಿಕ್ಕಟ್ಟನ್ನು "ಹೃದಯ ವಿದ್ರಾವಕ" ಎಂದು ಕರೆದಿರುವ ಸ್ವೀಡನ್ ನ ಪರಿಸರ ಹೋರಾಟಗಾರ್ತಿ  ಗ್ರೆಟಾ ಥನ್‌ಬರ್ಗ್, ಕೊರೋನವೈರಸ್ ಸೋಂಕಿನ ಎರಡನೇ ಅಲೆಯನ್ನು ನಿಭಾಯಿಸಲು ಜಾಗತಿಕ ಸಮುದಾಯವು ಭಾರತಕ್ಕೆ ಸಹಾಯ ಮಾಡಬೇಕು ಎಂದು ಅವರು ಟ್ವೀಟ್ ನಲ್ಲಿ ಆಗ್ರಹಿಸಿದ್ದಾರೆ.

"ಭಾರತದ ಇತ್ತೀಚಿನ ಬೆಳವಣಿಗೆಗಳು ಹೃದಯ ವಿದ್ರಾವಕವಾಗಿದೆ. ಜಾಗತಿಕ ಸಮುದಾಯವು ಎಚ್ಚೆತ್ತುಕೊಂಡು ತಕ್ಷಣವೇ ಅಗತ್ಯವಾದ ಸಹಾಯವನ್ನು ನೀಡಬೇಕು" ಎಂದು ವಿದೇಶಿ ಸುದ್ದಿ ವರದಿಯನ್ನು ಟ್ಯಾಗ್ ಮಾಡಿ ಅವರು ಟ್ವೀಟ್ ಮಾಡಿದ್ದಾರೆ.

ಭಾರತದಲ್ಲೀಗ ವಿಶ್ವದಲ್ಲಿ ಅತ್ಯಂತ ಹೆಚ್ಚು ದೈನಂದಿನ ಕೊರೋನ ಪ್ರಕರಣ ವರದಿಯಾಗುತ್ತಿದ್ದು,  ಕಳೆದ 24 ಗಂಟೆಗಳಲ್ಲಿ 3.46 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. 2,624 ಜನರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News