×
Ad

ಭಟ್ಕಳ: ಕರ್ಫ್ಯೂ ನಡುವೆ ಹಸೆಮಣೆ ಏರಿದ 22 ಜೋಡಿಗಳು

Update: 2021-04-25 21:13 IST

ಭಟ್ಕಳ: ವೀಕೆಂಡ್ ಕರ್ಫ್ಯೂ 2ನೇ ದಿನವಾಗಿರುವ ರವಿವಾರದಂದು ಭಟ್ಕಳ ತಾಲೂಕಿನಾದ್ಯಂತ ಸುಮಾರು 22 ನವಜೋಡಿಗಳು ಹಸೆಮಣೆ ಏರಿದ್ದು ನಿಗದಿತ ಸಂಖ್ಯೆಯ ಆಹ್ವಾನಿತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ಜೋಡಿಗಳಿಗೆ ಶುಭ ಹಾರೈಸಿದರು.

ಕರ್ಫ್ಯೂ ಇದ್ದಿದರಿಂದಾಗಿ ಮದುವೆಗೆ ಬೇಕಾದ ವಸ್ತುಗಳನ್ನು ಸಾಗಾಟ ಮಾಡಲು ವಧು ಮತ್ತು ವರನ ಕಡೆಯವರು ಹೆಣಗಾಡಬೇಕಾದ ಪ್ರಸಂಗ ಒದಗಿಬಂದಿತು. ಮದುವೆ ಕಾರ್ಯ ವಹಿಸಲು ಬೇಕಾದ ಸಲಕರಣೆಗಳು ಹಾಗೂ ತರಕಾರಿ ಇತರ ಸಾಮಾಗ್ರಿಗಳು ಸಿಗದೆ ಇರುವುದರಿಂದಾಗಿ ಹಲವು ಕಡೆಗಳಲ್ಲಿ ತೊಂದರೆಯುಂಟಾಯಿತು.

ಮದುವೆ ಸಮಾರಂಭಕ್ಕೆ ಸೆಕ್ಟರ್ ಅಧಿಕಾರಿಗಳ ಕಣ್ಗಾವಲು: ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮಗಳ ಪಾಲನೆಗೆ ಮತ್ತು ನಿರ್ಧಿಷ್ಠಪಡಿಸಿದ ಸಂಖ್ಯೆಯ ಜನರ ಭಾಗವಹಿಸುವಿಕೆಯನ್ನು ನಿಶ್ಚಯಪಡಿಸಿಕೊಳ್ಳಲು ಸೆಕ್ಟರ್ ಅಧಿಕಾರಿಗಳ ತಂಡ ಕಣ್ಗಾವಲು ವಹಿಸುತ್ತಿದೆ. ತಂಡದಲ್ಲಿ ಓರ್ವ ತಾಲೂಕು ಮಟ್ಟದ ಇಲಾಖೆಯ ಅಧಿಕಾರಿ, ಪಿಡಿಓ, ಗ್ರಾಮ ಲೆಕ್ಕಿಗ, ಮೂವರು ಪೊಲೀಸ್ ಸಿಬ್ಬಂದಿ ಇರಲಿದ್ದಾರೆ. ತಾಲೂಕಾಡಳಿತ ನೀಡಿದ 50 ಪಾಸ್ ಗಳ ಹೊರತಾಗಿ ಹೆಚ್ಚಿನ ಜನರು ಕಂಡು ಬಂದರೆ ಅವರಿಗೆ ದಂಡ ವಿಧಿಸುವ ಅಧಿಕಾರ ಸೆಕ್ಟರ್ ಅಧಿಕಾರಿಗಳಿಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News