×
Ad

ಕೋವಿಡ್ ನಿಯಮ ಉಲ್ಲಂಘನೆ; 185 ಕೇಸು ದಾಖಲು: ಕಮಿಷನರ್ ಶಶಿಕುಮಾರ್

Update: 2021-04-25 23:01 IST

ಮಂಗಳೂರು : ನಗರದಲ್ಲಿ ಕೋವಿಡ್ ನಿಯಮ ಉಲ್ಲಂಘನೆಯ 185 ಕೇಸುಗಳು ದಾಖಲಾಗಿದ್ದು, ಒಟ್ಟು 22,700 ರೂ. ದಂಡ ವಸೂಲಿ ಮಾಡಲಾಗಿದೆ. ಒಂದು ವಾಹನವನ್ನು ಜಫ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ತಿಳಿಸಿದ್ದಾರೆ.

ಈ ಎಲ್ಲ ಕೇಸುಗಳು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾತ್ರ ದಾಖಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಯಾವುದೇ ಕೇಸು ದಾಖಲಾಗಿಲ್ಲ. ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ 94 ಮಾಸ್ಕ್ ಉಲ್ಲಂಘನೆ ಕೇಸಿನಲ್ಲಿ 13,300 ರೂ. ದಂಡ ವಸೂಲಿ ಮಾಡಲಾಗಿದೆ. ರವಿವಾರ ಕೊರೋನ ಸೋಂಕು ತಡೆ ಕಾಯ್ದೆಯಡಿ ಒಂದು ಕೇಸು ದಾಖಲಾಗಿದೆ. 91 ಮಾಸ್ಕ್ ಉಲ್ಲಂಘನೆ ಕೇಸುಗಳಲ್ಲಿ 9,400 ರೂ. ದಂಡ ವಿಧಿಸಲಾಗಿದ್ದು, ಬಜಪೆ ವ್ಯಾಪ್ತಿಯಲ್ಲಿ ಒಂದು ವಾಹನ ಮುಟ್ಟುಗೋಲು ಹಾಕಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News