ಫ್ರಾನ್ಸ್ ಕಂಪೆನಿಯಿಂದ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ

Update: 2021-04-25 17:52 GMT

ಪ್ಯಾರಿಸ್ (ಫ್ರಾನ್ಸ್), ಎ. 25: ಫ್ರಾನ್ಸ್‌ನ ಬೃಹತ್ ಅನಿಲ ಉತ್ಪಾದನಾ ಕಂಪೆನಿ ಏರ್ ಲಿಕ್ವಿಡ್ ಎಸ್‌ಎ ಭಾರತದಲ್ಲಿನ ತನ್ನ ಕೈಗಾರಿಕಾ ಗ್ರಾಹಕರಿಗಾಗಿ ಉದ್ದೇಶಿಸಿರುವ ಎಲ್ಲ ಆಮ್ಲಜನಕವನ್ನು ಭಾರತದ ಆಸ್ಪತ್ರೆಗಳಿಗೆ ಕಳುಹಿಸುತ್ತಿದೆ. ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಅಗಾಧ ಹೆಚ್ಚಳದಿಂದಾಗಿ ದೇಶಾದ್ಯಂತ ಆಮ್ಲಜನಕಕ್ಕಾಗಿ ಉಂಟಾಗಿರುವ ಹಾಹಾಕಾರದ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.

ಏರ್ ಲಿಕ್ವಿಡ್ ಕಂಪೆನಿಯು ತನ್ನ ಹೆಚ್ಚಿನ ದ್ರವ ಆಮ್ಲಜನಕ ಉತ್ಪಾದನೆಯನ್ನು ಆರೋಗ್ಯ ಕ್ಷೇತ್ರಕ್ಕೆ ಕಳುಹಿಸುತ್ತಿದೆ ಹಾಗೂ ಇನ್ನೂ ಹೆಚ್ಚಿನ ಆಮ್ಲಜನಕವನ್ನು ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡಲು ಮುಂದಾಗಿದೆ ಎಂದು ಕಂಪೆನಿಯ ಉಪಾಧ್ಯಕ್ಷ ಫ್ರಾಂಕೋಯಿಸ್ ಜಾಕೊ ಹೇಳಿದ್ದಾರೆ.

ಭಾರತದಲ್ಲಿ ವೈದ್ಯಕೀಯ ಆಮ್ಲಜನಕಕ್ಕಾಗಿನ ಬೇಡಿಕೆ ಸುಮಾರು 10 ಪಟ್ಟು ಏರಿದೆ. ಇದು ದೇಶದ ಒಟ್ಟು ಆಮ್ಲಜನಕ ಉತ್ಪಾದನೆ ಸಾಮರ್ಥ್ಯದ 50 ಶೇಕಡಕ್ಕಿಂತಲೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ ಎಂದು ಜಾಕೋ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News