ಭಾರತಕ್ಕೆ ನೆರವು: ಇಯು, ಇಸ್ರೇಲ್, ಜರ್ಮನಿ ಭರವಸೆ

Update: 2021-04-25 18:04 GMT

ಬ್ರಸೆಲ್ಸ್ (ಬೆಲ್ಜಿಯಮ್), ಎ. 25: ಭಾರತವನ್ನು ತೀವ್ರ ಸಂಕಷ್ಟಕ್ಕೆ ಗುರಿಪಡಿಸಿರುವ ಕೋವಿಡ್-19 ಎರಡನೇ ಅಲೆಯ ವಿರುದ್ಧ ಹೋರಾಡುವುದಕ್ಕಾಗಿ ನೆರವು ನೀಡುವುದಾಗಿ ಯುರೋಪಿಯನ್ ಒಕ್ಕೂಟ (ಇಯು), ಇಸ್ರೇಲ್ ಮತ್ತು ಜರ್ಮನಿಗಳು ರವಿವಾರ ಭರವಸೆ ನೀಡಿವೆ.

ನೆರವಿಗಾಗಿ ಭಾರತ ಮನವಿ ಮಾಡಿದ ಬಳಿಕ, ನಾವು ಐರೋಪ್ಯ ಒಕ್ಕೂಟ ನಾಗರಿಕ ರಕ್ಷಣೆ ವ್ಯವಸ್ಥೆಗೆ ಚಾಲನೆ ನೀಡಿದ್ದೇವೆ. ಭಾರತದ ಜನರಿಗೆ ನೆರವು ನೀಡಲು ತನ್ನಿಂದಾಗುವ ಎಲ್ಲವನ್ನೂ ಐರೋಪ್ಯ ಒಕ್ಕೂಟ ಮಾಡುತ್ತದೆ. ತುರ್ತಾಗಿ ಬೇಕಾಗಿರುವ ಆಮ್ಲಜನಕ ಮತ್ತು ಔಷಧವನ್ನು ಒದಗಿಸಲು ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಬಿಕ್ಕಟ್ಟು ನಿರ್ವಹಣೆಗಾಗಿನ ಯುರೋಪಿಯನ್ ಕಮಿಶನರ್ ಜನೇರ್ ಲೆನಾರ್ಸಿಕ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News