ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಉಚಿತ ತುರ್ತು ಆಮ್ಲಜನಕ ಸಿಲಿಂಡರ್ ಸೇವೆ
Update: 2021-04-26 13:31 IST
ಉಡುಪಿ, ಎ. 26: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕೊರೋನ ಸೋಂಕಿತರಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಉಸಿರಾಟದ ಸಮಸ್ಯೆ ಯಿಂದ ಬಳಲುತ್ತಿರುವ ಹಾಗೂ ಅಗತ್ಯ ಇರುವ ರೋಗಿಗಳಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಉಚಿತವಾಗಿ ಆಮ್ಲಜನಕ ಸಿಲಿಂಡರ್ ಒದಗಿಸಲಿದೆ.
ಆಕ್ಸಿಜನ್ ಮಾಸ್ಕನ್ನು ಮಾತ್ರ ಬಳಕೆದಾರರು ಖರೀದಿಸಿಕೊಳ್ಳಬೇಕು. ಆಮ್ಲಜನಕ ಸಿಲಿಂಡರ್ 6 ರಿಂದ 7 ಗಂಟೆಗಳ ಕಾಲ ಬಳಸಬಹುದಾದ ಸಾಮರ್ಥ್ಯ ಹೊಂದಿದೆ. ಬಳಸಿದ ಬಳಿಕ ಸಿಲಿಂಡರ್ ಅನ್ನು ಹಿಂತಿರುಗಿಸಬೇಕು. ತುರ್ತು ಅವಶ್ಯಕತೆ ಇದ್ದವರು ಉಡುಪಿ ನಗರದ, ಮಾರುಥಿ ವೀಥಿಕಾ- ಇಲ್ಲಿರುವ ನಾಗರಿಕ ಸಮಿತಿಯ ಜನಸಂಪರ್ಕ ಕಚೇರಿಯನ್ನು ಸಂಪರ್ಕಿಸುವಂತೆ, ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು (ಸಂಪರ್ಕ ಸಂಖ್ಯೆ:- 9164901111) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.