×
Ad

ಬಡ ಕುಟುಂಬಗಳಿಗೆ ರಮಾಝಾನ್ ಕಿಟ್ ವಿತರಣೆ

Update: 2021-04-26 18:53 IST

ಉಡುಪಿ, ಎ.26: ಮಣಿಪುರ ಮುಸ್ಲಿಮ್ ಅಸೋಸಿಯೇಶನ್ ಕುವೈಟ್ ಇದರ ವತಿಯಿಂದ ಈ ವರ್ಷವೂ ಅರ್ಹ ಬಡ ಕುಟುಂಬಗಳಿಗೆ ರಮಾಝಾನ್ ಪ್ರಯುಕ್ತ ಆಹಾರ ಸಾಮಗ್ರಿಗಳ ಕಿಟ್‌ನ್ನು ವಿತರಿಸಲಾಯಿತು.

ಸಂಘದ ಗೌರವಾಧ್ಯಕ್ಷ ಸೈಯ್ಯದ್ ಅಹಮದ್ ನೇತೃತ್ವದಲ್ಲಿ ರಮಝಾನ್ ಕಿಟ್‌ನ ವ್ಯವಸ್ಥೆ ಮಾಡಲಾಯಿತು. ಸಂಘದ ಕೋಶಾಧಿಕಾರಿ ಶಂಶುದ್ಧೀನ್, ಹಮೀದ್ ಮಣಿಪುರ, ಮಜೀದ್ ಬಿರಾಲಿ, ಅನ್ವರ್ ಕುಂಜಾಲ್, ರಫೀಕ್ ಸಾಹೇಬ್, ಅನ್ಸಾರ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂಸ್ಥೆ ಸುಮಾರು ಹದಿನಾರು ವರ್ಷಗಳಿಂದ ಜನಪರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News