ಭಾರತಕ್ಕೆ ಹೆಚ್ಚುವರಿ ಆಮ್ಲಜನಕ ಸಾಮರ್ಥ್ಯ: ಫ್ರಾನ್ಸ್ ಭರವಸೆ

Update: 2021-04-26 17:35 GMT

ಪ್ಯಾರಿಸ್ (ಫ್ರಾನ್ಸ್), ಎ. 26: ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸಹಾಯವಾಗುವಂತೆ, ಮುಂಬರುವ ದಿನಗಳಲ್ಲಿ ಭಾರತಕ್ಕೆ ಹೆಚ್ಚುವರಿ ಆಮ್ಲಜನಕ ಸಾಮರ್ಥ್ಯವನ್ನು ಒದಗಿಸಲು ಫ್ರಾನ್ಸ್ ಚಿಂತನೆ ನಡೆಸಿದೆ ಎಂದು ದೇಶದ ಅಧ್ಯಕ್ಷರ ಕಚೇರಿ ರವಿವಾರ ತಿಳಿಸಿದೆ.

ತುರ್ತಾಗಿ ಬೇಕಾಗಿರುವ ಆಮ್ಲಜನಕ ವೆಂಟಿಲೇಟರ್‌ಗಳ ಪೂರೈಕೆಯೂ ಈ ನೆರವಿನಲ್ಲಿ ಸೇರಿದೆ ಎಂದು ಮೂಲವೊಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ. ಆದರೆ ಅದು ಹೆಚ್ಚಿನ ವಿವರಗಳನ್ನು ಒದಗಿಸಿಲ್ಲ.

ರವಿವಾರ ಒಂದೇ ದಿನ ಭಾರತದಲ್ಲಿ 3,49,691 ಹೊಸ ಕೊರೋನ ಸೋಂಕು ಪ್ರಕರಣಗಳು ದಾಖಲಾಗಿವೆ.

ಭಾರತಕ್ಕೆ ನೆರವು ನಿಡುವುದಾಗಿ ಈಗಾಗಲೇ ಜರ್ಮನಿ, ಬ್ರಿಟನ್ ಮತ್ತು ಅಮೆರಿಕಗಳು ಘೋಷಿಸಿವೆ.

ಐರೋಪ್ಯ ಒಕ್ಕೂಟವೂ ಭಾರತಕ್ಕೆ ತುರ್ತು ನೆರವನ್ನು ಆಯೋಜಿಸುತ್ತಿದೆ ಎಂದು ಯುರೋಪಿಯನ್ ಕಮಿಶನ್ ಮುಖ್ಯಸ್ಥ ಉರ್ಸುಲ ವೊನ್ ಡೆರ್ ಲೆಯನ್ ಈಗಾಗಲೇ ಹೇಳಿದ್ದಾರೆ.

 ನೆರವು ನೀಡುವಂತೆ ಭಾರತ ಮಾಡಿರುವ ಮನವಿಗೆ ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವುದಕ್ಕಾಗಿ ಐರೋಪ್ಯ ಒಕ್ಕೂಟವು ಸಂಪನ್ಮೂಲಗಳನ್ನು ಒಗ್ಗೂಡಿಸುತ್ತಿದೆ ಎಂದು ಲೆಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News