ಕೊರೋನ ಸೋಂಕು ಪ್ರಕರಣಗಳಲ್ಲಿ ಏರಿಕೆ ಹೊಸ ನಿರ್ಬಂಧ ವಿಧಿಸಿದ ಕೇರಳ ಸರಕಾರ

Update: 2021-04-26 18:24 GMT

ಹೊಸದಿಲ್ಲಿ, ಎ. 26: ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ಮಂಗಳವಾರದಿಂದ ಹೊಸ ನಿರ್ಬಂಧಗಳನ್ನು ಹೇರಿದೆ.

ಸಿನೆಮಾ ಮಂದಿರ, ಮಾಲ್, ಜಿಮ್ನಾಷಿಯಂ, ಕ್ಲಬ್, ಸ್ಫೋರ್ಟ್ಸ್ ಸಂಕೀರ್ಣ, ಈಜುಕೊಳ, ಮನೋರಂಜನಾ ಪಾರ್ಕ್, ಬಾರ್‌ಗಳನ್ನು ಮುಚ್ಚುವಂತೆ ಸರಕಾರ ಆದೇಶಿಸಿದೆ. ಶನಿವಾರ ಹಾಗೂ ರವಿವಾರ ಕೇವಲ ಅಗತ್ಯದ ಹಾಗೂ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಸರಕಾರಿ ಕಚೇರಿಗಳು ಹಾಗೂ ಸರಕಾರದ ಅಂಗ ಸಂಸ್ಥೆಗಳ ಕಚೇರಿಗಳು ಶನಿವಾರ ಕೂಡ ಮುಚ್ಚಲಿವೆ.

ಅಂಗಡಿ ಹಾಗೂ ರೆಸ್ಟೋರೆಂಟ್‌ಗಳು ಸಂಜೆ 7.30ಕ್ಕೆ ಮುಚ್ಚಲಿವೆ. ಪಾರ್ಸ್‌ಲ್ ಹಾಗೂ ಹೋಮ್ ಡೆಲಿವರಿಗೆ 9 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಎರಡು ಮೀಟರ್ ಸುರಕ್ಷಿತ ಅಂತರದಲ್ಲಿ ಗರಿಷ್ಠ 50 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಎಲ್ಲ ಸಭೆಗಳನ್ನು ಆನ್‌ಲೈನ್ ಮೂಲಕವೇ ನಡೆಸುವಂತೆ ಸೂಚಿಸಲಾಗಿದೆ. ಎಲ್ಲ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ದಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News