×
Ad

ತುರ್ತು ಬಳಕೆಗಾಗಿ ಮೋಡರ್ನಾ ಲಸಿಕೆಯ ಪರಿಶೀಲನೆ: ಡಬ್ಲ್ಯುಎಚ್ಒ

Update: 2021-04-26 23:55 IST

ಜಿನೀವ (ಸ್ವಿಟ್ಸರ್ಲ್ಯಾಂಡ್), ಎ. 26: ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯುಎಚ್ಒ)ಯ ತುರ್ತು ಬಳಕೆಗಾಗಿ ಅಮೆರಿಕದ ಮೋಡರ್ನಾ ಕಂಪೆನಿಯ ಲಸಿಕೆಯನ್ನು ತಾಂತ್ರಿಕ ತಜ್ಞರು ಪರಿಶೀಲನೆಗೆ ಒಳಪಡಿಸಿದ್ದಾರೆ ಎಂದು ಸಂಸ್ಥೆಯ ವಕ್ತಾರರೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘‘ತಾಂತ್ರಿಕ ಸಲಹಾ ಗುಂಪಿನಲ್ಲಿ ಮೋಡರ್ನಾ ಲಸಿಕೆಯನ್ನು ಪರಿಶೀಲಿಸಲಾಗುತ್ತಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್ ಲಿಂಡ್ಮಯರ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಈ ಲಸಿಕೆಯ ಕುರಿತ ನಿರ್ಧಾರವು ನಾಲ್ಕು ದಿನಗಳಲ್ಲಿ ಹೊರಬೀಳಬಹುದು ಎಂದು ಅವರು ಹೇಳಿದರು.
ಈವರೆಗೆ ಫೈಝರ್, ಆ್ಯಸ್ಟ್ರಝೆನೆಕ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಗಳು ತಯಾರಿಸಿರುವ ಕೋವಿಡ್-19 ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆದ ಲಭಿಸಿದೆ.

ಕೊರೋನ ವೈರಸ್ ಎರಡನೇ ಅಲೆಯ ಭೀಕರ ಆಘಾತಕ್ಕೆ ಸಿಲುಕಿರುವ ಭಾರತಕ್ಕೆ ಬೆಂಬಲ ಸೂಚಿಸಿ ಜಗತ್ತಿನ ಅತಿ ಎತ್ತರದ ಕಟ್ಟಡ ದುಬೈಯ ಬುರ್ಜ್ ಖಲೀಫದಲ್ಲಿ ರವಿವಾರ ರಾತ್ರಿ ಭಾರತದ ರಾಷ್ಟ್ರಧ್ವಜವನ್ನು ದೀಪದಿಂದ ಬೆಳಗಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News