×
Ad

​ಸಾಂತ್ಯಾರು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

Update: 2021-04-27 17:18 IST

ಉಡುಪಿ, ಎ.27: ಉಡುಪಿ ಶ್ರೀಶಿರೂರು ಮಠದ ಆಡಳಿತಕ್ಕೆ ಒಳಪಟ್ಟ ತಾಲೂಕಿನ ಬೈರಂಪಳ್ಳಿ ಗ್ರಾಮದ ಸಾಂತ್ಯಾರು ಶ್ರೀಗೋಪಾಲಕೃಷ್ಣ ಮತ್ತು ಶ್ರೀಮುಖ್ಯಪ್ರಾಣ ದೇವಸ್ಥಾನ ದಲ್ಲಿ ಮುಖ್ಯಪ್ರಾಣ ದೇವರ ಪುನ:ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಸೋಮವಾರ ಸಂಪನ್ನಗೊಂಡಿತು.

ಸೋದೆ ಶ್ರೀವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಿರೂರು ರಾಮದಾಸ ಭಟ್ ಹಾಗೂ ಬೆಳ್ಳರ್ಪಾಡಿ ರಾಮಮೂರ್ತಿ ಇವರ ನೇತೃತ್ವದಲ್ಲಿ ನೆರವೇರಿದವು.

ಕರ್ನಾಟಕ ಸರಕಾರದ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಯನ್ವಯ ನಡೆದ ಕಾರ್ಯಕ್ರಮದಲ್ಲಿ ಶಿರೂರು ಮೂಲಮಠದ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ಭಟ್, ಶಿರೂರು ಮಠದ ಆಡಳಿತ ಕಾರ್ಯದರ್ಶಿ ರತ್ನಕುಮಾರ್ ಹಾಗೂ ಸಾಂತ್ಯಾರು ಗ್ರಾಮದ ಮುಖ್ಯಸ್ಥರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News