×
Ad

ಕೋವಿಡ್ ಕಂಟೈನ್‌ಮೆಂಟ್ ವಲಯವಾಗಿ ಕೋಟದ ಆಶ್ರಿತ್ ನರ್ಸಿಂಗ್ ಕಾಲೇಜು

Update: 2021-04-27 21:11 IST

ಉಡುಪಿ, ಎ.27: ಕೋಟತಟ್ಟು ಗ್ರಾಪಂ ವ್ಯಾಪ್ತಿಯಲ್ಲಿರುವ ಆಶ್ರಿತ್ ನರ್ಸಿಂಗ್ ಕಾಲೇಜನ್ನು ಕೋವಿಡ್ ಸೋಂಕಿಗೆ ಉಡುಪಿ ಜಿಲ್ಲೆಯ ಹೊಸ ಕಂಟೈನ್‌ಮೆಂಟ್ ಝೋನ್ ಆಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಘೋಷಿಸಿದ್ದಾರೆ.

ಬ್ರಹ್ಮಾವರ ತಾಲೂಕಿನಲ್ಲಿರುವ ಈ ಕಾಲೇಜಿನ ಹಾಸ್ಟೆಲ್‌ನಲ್ಲಿ ಎ.22ರಂದು ಒಬ್ಬರು ಹಾಗೂ ಎ.24ರಂದು ಏಳು ಮಂದಿ ಪಾಸಿಟಿವ್ ಬಂದಿದ್ದರು. ಹೀಗಾಗಿ ಇದನ್ನು ಸಕ್ರಿಯ ಕಂಟೈನ್‌ಮೆಂಟ್ ವಲಯವನ್ನಾಗಿ ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಇದೀಗ ಈ ಹಾಸ್ಟೆಲ್‌ನ 100ಮೀ. ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವನ್ನಾಗಿಯೂ, ಇದರ 200 ಮೀ. ಸುತ್ತಳತೆಯ ಪ್ರದೇಶವನ್ನು ಬಫರ್ ರೆನ್ ಆಗಿಯೂ ಘೋಷಿಸಲಾಗಿದೆ.

ಕಂಟೈನ್‌ಮೆಂಟ್ ವಲಯದಲ್ಲಿ ಒಂದು ಹಾಸ್ಟೆಲ್, ಒಂದು ಕಚೇರಿ ಇದ್ದು 74 ಮಂದಿ ವಾಸವಾಗಿದ್ದಾರೆ. ಬಫರ್ ವಲಯದಲ್ಲಿ 40 ಮನೆಗಳು, 15 ಅಂಗಡಿಗಳಿದ್ದು ಜನಸಂಖ್ಯೆ 1037 ಇದೆ. ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಅವರನ್ನು ಈ ಕಂಟೈನ್‌ಮೆಂಟ್ ವಲಯದ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಳ ಪ್ರಕಟಣೆ ತಿಳಿಸಿದೆ.

ಕಾರ್ಕಳ ತಾಲೂಕಿನ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲೂ ಇಂದು 12 ಸೇರಿದಂತೆ 25ಕ್ಕೂ ಅಧಿಕ ವಿದ್ಯಾರ್ಥಿಗಳು ಈವರೆಗೆ ಪಾಸಿಟಿವ್ ಬಂದಿದ್ದು, ಇದನ್ನು ಸಹ ಕಂಟೈನ್‌ಮೆಂಟ್ ವಲಯವಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News