×
Ad

ಬ್ಯಾಂಕ್ ಗ್ರಾಹಕ ಸೇವಾ ಸೇವೆಯ ಸಮಯದಲ್ಲಿ ಬದಲಾವಣೆ

Update: 2021-04-27 21:27 IST
ಸಾಂದರ್ಭಿಕ ಚಿತ್ರ

ಮಂಗಳೂರು, ಎ.27: ಕೊರೋನ ಸಾಂಕ್ರಾಮಿಕ ರೋಗ ತಡೆಗಟ್ಟಲು ಬ್ಯಾಂಕಿನ ವ್ಯವಹಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಕರ್ನಾಟಕ ಬ್ಯಾಂಕ್ ಸಮಿತಿಯ ಆದೇಶದ ಪ್ರಕಾರ ಎ.22ರಿಂದ ಮೇ.31,2021ರವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ದೊರೆಯಲಿದೆ.

ಅಗತ್ಯ ಸೇವೆಗಳಾದ ನಗದು ವ್ಯವಹಾರ, ಚೆಕ್ ಕ್ಲಿಯರಿಂಗ್ ಮತ್ತು ಸರಕಾರದ ವ್ಯವಹಾರಗಳನ್ನು ಮಾತ್ರ ನಡೆಸಲಾಗುವುದು.ಉಳಿದಂತೆ ಇತರ ಸೇವೆಗಳನ್ನು ಡಿಜಿಟಲ್ ವ್ಯವಸ್ಥೆಗಳ ಮೂಲಕ ಪಡೆದುಕೊಳ್ಳಬಹುದು ಎಂದು ಬ್ಯಾಂಕ್ ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News