ಆಗುಂಬೆ ಘಾಟಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆದ ಕಿಡಿಗೇಡಿಗಳು!

Update: 2021-04-27 16:51 GMT

ಹೆಬ್ರಿ, ಎ.27: ಲಾಕ್‌ಡೌನ್ ಹಿನ್ನಲೆ ಗೂಳೆ ಹೊರಟ ಕೆಲವೊಂದು ಜನ ಅಗುಂಬೆ ಘಾಟಿ ಪ್ರದೇಶದಲ್ಲಿ ತಮ್ಮ ಮನೆಗಳ ಪ್ಲಾಸ್ಟಿಕ್ ಕಸಗಳನ್ನು ಸುರಿದು ಹೋಗುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಬಂದ ಮಾಹಿತಿಯಂತೆ ಹೆಬ್ರಿಯ ಸಾಮಾಜಿಕ ಕಾರ್ಯಕರ್ತ ಮಿಥುನ್ ಶೆಟ್ಟಿ, ಸ್ಥಳಕ್ಕೆ ತೆರಳಿ ಕಸ ಎಸೆಯುತ್ತಿದ್ದ ಸ್ಥಳೀಯರಿಗೆ ಪರಿಸರ ಹಾಗೂ ಸ್ವಚ್ಚತೆ ಬಗ್ಗೆ ತಿಳಿ ಹೇಳಿದರು. ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿದ್ದು, ಜನ ಹಾಕಿದ ತ್ಯಾಜ್ಯಗಳನ್ನು ತಿಂದಲ್ಲಿ ಅವುಗಳ ಅರೋಗ್ಯಕ್ಕೂ ಹಾನಿ ಯಾಗುವುದರ ಜೊತೆಗೆ ಸ್ವಚ್ಚಂದ ಪರಿಸರವೂ ಹಾಳಾಗುತ್ತವೆ ಎಂದು ಅವರು ತಿಳಿಸಿದರು.

ಕಸ ತಂದಿದ್ದವರು ತಮ್ಮ ಕಸವನ್ನು ವಾಪಸ್ ಕೊಂಡುಹೋಗುವಂತೆ ಮನವರಿಕೆ ಮಾಡಿದರು. ಬಳಿಕ ಈ ಸಂಬಂಧ ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News