×
Ad

ಕೋವಿಡ್ ಕರ್ಫ್ಯೂ ಹಿನ್ನೆಲೆ: ದ.ಕ.ಜಿಲ್ಲೆಯಲ್ಲಿ 85 ಚೆಕ್‌ಪೋಸ್ಟ್

Update: 2021-04-27 22:34 IST

ಮಂಗಳೂರು, ಎ. 27: ಕೋವಿಡ್ ಕರ್ಫ್ಯೂವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಂಗಳೂರು ನಗರ ಪೊಲೀಸ್ ಆಯುಕ್ತಾಲಯವು ದ.ಕ ಜಿಲ್ಲಾದ್ಯಂತ ಒಟ್ಟು 85 ಚೆಕ್‌ಪೋಸ್ಟ್‌ಗಳನ್ನು ತೆರೆದಿದೆ. ಆ ಮೂಲಕ ಸಾರ್ವಜನಿಕರ ಓಡಾಟ ಮತ್ತು ವಾಹನಗಳ ಅನಗತ್ಯ ಸಂಚಾರಕ್ಕೆ ತಡೆಯೊಡ್ಡಲು ಪಣತೊಟ್ಟಿವೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ 54 ಮತ್ತು ಗ್ರಾಮಾಂತರ ಜಿಲ್ಲೆ, ಅಂತರ್‌ಜಿಲ್ಲೆ ಮತ್ತು ಅಂತರ್‌ರಾಜ್ಯ ಸಹಿತ 31 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ತುರ್ತುಸೇವೆ ಹೊರತುಪಡಿಸಿ ಅನಗತ್ಯ ತಿರುಗಾಡದೆ ಕರ್ಫ್ಯೂ ಯಶಸ್ವಿಗೆ ಮತ್ತು ಕೊರೋನ ನಿಯಂತ್ರಿಸಲು ಸಹಕರಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಜಿಲ್ಲಾ ಎಸ್ಪಿ ಋಷಿಕೇಶ್ ಸೋನವನೆ ಮನವಿ ಮಾಡಿದ್ದಾರೆ.

ನಗರದಲ್ಲಿ ಕರ್ಫ್ಯೂ ಅನ್ನು ಪರಿಣಾಮಕಾರಿಗೊಳಿಸಲು ಪೊಲೀಸರು ಅಗತ್ಯ ಸಿದ್ಧತೆಗಳನ್ನು ಮಾಡಿದ್ದು, 54 ಚೆಕ್‌ಪೋಸ್ಟ್‌ಗಳನ್ನು ಅಳವಡಿಸಲಾಗಿದೆ. ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಅಧಿಕಾರಿ, ಸಿಬ್ಬಂದಿ ಸಹಿತ ಸುಮಾರು 1,000 ಮಂದಿ ಪೊಲೀಸರು ವಿವಿಧ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜನರು ಪೊಲೀಸರೊಂದಿಗೆ ಸಹಕರಿಸಿ ಕೊರೋನ ಸೋಂಕು ನಿಗ್ರಹದಲ್ಲಿ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News