×
Ad

​ಉಚಿತ ಲಸಿಕೆ ಹಾಗೂ ಅಗತ್ಯ ನೆರವು ನೀಡಲು ಸಿಪಿಎಂ ಮನವಿ

Update: 2021-04-27 23:53 IST

ಮಂಗಳೂರು, ಎ.27: ಕೊರೋನ 2ನೆ ಅಲೆಯನ್ನು ನಿಗ್ರಹಿಸುವಲ್ಲಿ ಸಂಪೂರ್ಣವಾಗಿ ಸೋತಿರುವ ಕೇಂದ್ರ ಮತ್ತು ರಾಜ್ಯ ಸರಕಾರವು ಲಾಕ್‌ಡೌನ್ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ. ಹಾಗಾಗಿ ಸರಕಾರವು ಉಚಿಯ ಲಸಿಕೆ ಮತ್ತು ಅಗತ್ಯ ನೀಡಲು ಮುಂದಾಗಬೇಕು ಎಂದು ಸಿಪಿಐ ದ.ಕ.ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ತಜ್ಞರ ಮುನ್ನೆಚ್ಚರಿಕೆಯನ್ನು ಕಡೆಗಣಿಸಿದ್ದೇ ಕೊರೋನ ಸೋಂಕು ಹೆಚ್ಚಾಗಳು ಕಾರಣವಾಗಿದೆ. ಕರ್ಫ್ಯೂನಿಂದಾಗಿ ಉದ್ಯೋಗಕ್ಕೆ ಹೋಗಲಾಗದ ಕಟ್ಟಡ ಕಾರ್ಮಿಕರ ಸಹಿತ ಎಲ್ಲಾ ಕಾರ್ಮಿಕ ವರ್ಗದವರಿಗೆ ಆಹಾರ ಲಭ್ಯತೆ, ವಾಸ್ತವ್ಯದ ಸಮಸ್ಯೆ ಎದುರಾಗಿದೆ. ಅವರ ಸಮಸ್ಯೆಯ ಪರಿಹಾರಕ್ಕೆ ಜಿಲ್ಲಾಡಳಿತ ಜೊತೆ ಸಿಪಿಎಂ ಮತ್ತು ಡಿವೈಎಫ್‌ಐ ಕಾರ್ಯಕರ್ತರು ಕೈ ಜೋಡಿಸಲು ಸಿದ್ಧರಿದ್ದಾರೆ. ಹಾಗಾಗಿ ಈ ಕಾರ್ಯಕರ್ತರ ಅಗತ್ಯ ಸಂಚಾರಕ್ಕೆ ಪಾಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಿಪಿಎಂ ನಿಯೋಗ ಮನವಿ ಸಲ್ಲಿಸಿದೆ.

ಬೀಡಿ ಕಾರ್ಮಿಕರು ಕಟ್ಟಿದ ಬೀಡಿಯನ್ನು ಗುತ್ತಿಗೆದಾರರು ಬೀಡಿ ಕಂಪೆನಿಗಳ ಮಾಲಕರಿಗೆ ತಲುಪಿಸಲು ಅಡಚಣೆಯಾಗಿದೆ. ಇದರಿಂದಾಗಿ ಲಕ್ಷ ಸಂಖ್ಯೆಯ ಬೀಡಿ ಕಾರ್ಮಿಕರು ಉದ್ಯೋಗ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಬೀಡಿ ಗುತ್ತಿಗೆದಾರರಿಗೆ ಸಂಗ್ರಹಿಸಿದ ಬೀಡಿಯನ್ನು ಮಾಲಕರಿಗೆ ತಲಪಿಸಲು ಜಿಲ್ಲಾಡಳಿತವು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದೆ.

ನಿಯೋಗದಲ್ಲಿ ವಸಂತ ಆಚಾರಿ, ಕೆ.ಯಾದವ ಶೆಟ್ಟಿ, ಜೆ.ಬಾಲಕೃಷ್ಣ ಶೆಟ್ಟಿ, ಕೆ.ಕೃಷ್ಣಪ್ಪಸಾಲಿಯಾನ್, ವಾಸುದೇವ ಉಚ್ಚಿಲ, ಮುನೀರ್ ಕಾಟಿಪಳ್ಳ, ಯು.ಬಿ.ಲೋಕಯ್ಯ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News