18 ವರ್ಷಕ್ಕಿಂತ ಮೇಲ್ಮಟ್ಟ ಜನತೆಗೆ ಇಂದು ಸಂಜೆ 4 ಗಂಟೆಯಿಂದ ಕೋವಿಡ್ ಲಸಿಕೆಗೆ ನೋಂದಣಿ ಆರಂಭ

Update: 2021-04-28 07:37 GMT

ಹೊಸದಿಲ್ಲಿ: ಹದಿನೆಂಟು ವರ್ಷಕ್ಕಿಂತ ಮೇಲ್ಮಟ್ಟ ಭಾರತೀಯರು ಇಂದು ಸಂಜೆ 4 ಗಂಟೆಯಿಂದ ಕೋವಿಡ್-19 ವಿರುದ್ಧ ಲಸಿಕೆ ಹಾಕಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರಕಾರ ತಿಳಿಸಿದೆ.

18ಕ್ಕೂ ಹೆಚ್ಚಿನ ವಯಸ್ಸಿನವರು ಲಸಿಕೆಗಾಗಿ ನೋಂದಣಿ ಪ್ರಕ್ರಿಯೆಯು http://cowin.gov.in ಆರೋಗ್ಯ ಸೇತು ಅಪ್ಲಿಕೇಶನ್ ಹಾಗೂ ಉಮಾಂಗ್ ನಲ್ಲಿ ಎಪ್ರಿಲ್ 28ರಂದು ಸಂಜೆ 4 ಗಂಟೆಗೆ ಆರಂಭವಾಗಲಿದೆ. ಮೇ 1ರಂದು 18ಕ್ಕಿಂತ ಮೇಲ್ಮಟ್ಟ ವಯಸ್ಸಿನವರಿಗೆ ಲಸಿಕೆಗೆ  ಎಷ್ಟು ಲಸಿಕಾ ಕೇಂದ್ರಗಳು ಸಿದ್ದವಾಗಿವೆ ಎಂಬುದರ ಆಧಾರದ ಮೇಲೆ ರಾಜ್ಯ ಸರಕಾರಿ ಕೇಂದ್ರಗಳು ಹಾಗೂ ಖಾಸಗಿ ಕೇಂದ್ರಗಳಲ್ಲಿ ಅಪಾಯಿಂಟ್ ಮೆಂಟ್  ಗಳು ಲಭ್ಯವಿರುತ್ತದೆ ಎಂದು ಕೇಂದ್ರ ಸರಕಾರದ ಮೊಬೈಲ್ ಅಪ್ಲಿಕೇಶನ್ ನ ಆರೋಗ್ಯ ಸೇತುವಿನಲ್ಲಿ ಟ್ವೀಟ್ ಮಾಡಲಾಗಿದೆ.

ಲಸಿಕೆಗೆ ನೀವು ಹೇಗೆ ನೋಂದಾಣಿಸಿಕೊಳ್ಳಬಹುದು ಎಂಬುದು ಇಲ್ಲಿದೆ

http://www.cowin.gov.in/ homeಗೆ ಹೋಗಿ ಹಾಗೂ “ರಿಜಿಸ್ಟರ್/ ಸೈನ್ ಇನ್’’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 

ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಹಾಗೂ ಒಟಿಪಿ ರಚಿಸಿ.

ಒಟಿಪಿ ನಮೂದಿಸಿ ಹಾಗೂ ಅದನ್ನು ಪರಿಶೀಲಿಸಿ.

ಒಟಿಪಿಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯ ಪರಿಶೀಲನೆಯನ್ನು ಅನುಸರಿಸಿ, ಹೆಸರು, ವಯಸ್ಸು, ಲಿಂಗ ಹಾಗೂ ಫೋಟೊ ಐಡಿಯಂತಹ ಅಗತ್ಯ ವಿವರಗಳೊಂದಿಗೆ ನಿಮ್ಮನ್ನು ನೋಂದಾಯಿಸಿ.

ರಿಜಿಸ್ಟರ್ ಕ್ಲಿಕ್ ಮಾಡಿ ಹಾಗೂ ನಂತರ ವೇಳಾಪಟ್ಟಿ ಆಯ್ಕೆಗೆ ಹೋಗಿ.

ನಿಮ್ಮ ಪ್ರದೇಶದ ಪಿನ್ ಕೋಡ್ ಅನ್ನು ನಮೂದಿಸಿ ಅಥವಾ ರಾಜ್ಯಗಳ ಪಟ್ಟಿಯಿಂದ ಆಯ್ಕೆ ಮಾಡಿ. ನಂತರ ಜಿಲ್ಲೆಗಳನ್ನು ಆಯ್ಕೆ ಮಾಡಿ.

ನಿಮ್ಮ ಆದ್ಯತೆಯ ವ್ಯಾಕ್ಸಿನೇಶನ್ ಕೇಂದ್ರ, ದಿನಾಂಕ ಹಾಗೂ ಸಮಯವನ್ನು ಆಯ್ಕೆ ಮಾಡಿ ಹಾಗೂ ದೃಢಪಡಿಸಿ.

ಕಳೆದ ಸೋಮವಾರ ಕೇಂದ್ರವು ಮೇ 1ರಿಂದ 18 ವರ್ಷಕ್ಕಿಂತ ಮೇಲ್ಮಟ್ಟ ಎಲ್ಲರಿಗೂ ಚುಚ್ಚುಮದ್ದನ್ನು ನೀಡುವುದಾಗಿ ಘೋಷಿಸಿತ್ತು. ಭಾರತವು ಜನವರಿ 2021ರಲ್ಲಿ ವಿಶ್ವದ ಅತ್ಯಂತ ದೊಡ್ಡ ಲಸಿಕಾ ಅಭಿಯಾನವನ್ನು ಆರಂಭಿಸಿತ್ತು. ಮೊದಲ ಹಂತದಲ್ಲಿ ಆರೋಗ್ಯ ನೈರ್ಮಲ್ಯ ಹಾಗೂ ಇತರ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News