×
Ad

ಕೊರೋನ ಕರ್ಫ್ಯೂ: ಬ್ಯಾಂಕ್ ಗಳಲ್ಲಿ ಅಪರಾಹ್ನ 2ರವರೆಗೆ ವ್ಯವಹಾರಕ್ಕೆ ಅವಕಾಶ

Update: 2021-04-28 13:51 IST
ಸಾಂದರ್ಭಿಕ ಚಿತ್ರ

ಮಂಗಳೂರು, ಎ. 29: ಕಠಿಣ ಕೊರೋನ ಕರ್ಫ್ಯೂ ನಡುವೆಯೂ ಬ್ಯಾಂಕ್ ತೆರೆದಿದ್ದು, ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್ ಸೇವಾ ಅವಧಿ ಸಾರ್ವಜನಿಕರಿಗೆ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಬ್ಯಾಂಕ್‌ಗಳು ತೆರೆದಿದ್ದು, ಅಪರಾಹ್ನ 2 ಗಂಟೆಯವರೆಗೆ ಮಾತ್ರ ವ್ಯವಹಾರಕ್ಕೆ ಅವಕಾಶವಿದೆ. ಬಳಿಕ ಬ್ಯಾಂಕ್‌ನ ಸಿಬ್ಬಂದಿ ಆಂತರಿಕ ಕೆಲಸವನ್ನು ನಿರ್ವಹಿಸಲಿದ್ದಾರೆ. ಬ್ಯಾಂಕ್‌ಗಳಲ್ಲಿ ಶೇ. 50ರಷ್ಟು ಸಿಬ್ಬಂದಿಯೊಂದಿಗೆ ಗ್ರಾಹಕ ಸೇವೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್‌ಗಳಲ್ಲಿ ಮುಖ್ಯವಾಗಿ ಕಳೆದ ಮೂರು ತಿಂಗಳಿನಿಂದೀಚೆಗೆ ಗ್ರಾಹಕರಿಗೆ ಡಿಜಿಟಲ್ ಸೇವೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಎಟಿಎಂಗಳು ಕೂಡಾ ಕಾರ್ಯನಿರ್ವಹಿಸುತ್ತಿವೆ.

‘‘ಕೋವಿಡ್‌ನ ಈ ಕಠಿಣ ಪರಿಸ್ಥಿತಿಯಲ್ಲೂ ಅಗತ್ಯ ವ್ಯವಹಾರಗಳಿಗೆ ಸಂಬಂಧಿಸಿ ಬ್ಯಾಂಕ್‌ಗಳು ಗ್ರಾಹಕರಿಗಾಗಿ ಅಪರಾಹ್ನ 2 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿವೆ. ಈ ಸಂದರ್ಭ ಕೇವಲ ಪ್ರಮುಖ ಕಾರ್ಯಗಳಾದ ಹಣ ವರ್ಗಾವಣೆ, ಠೇವಣಿ, ಕ್ಲಿಯರಿಂಗ್ ಹಾಗೂ ಯಾವುದೇ ರೀತಿಯ ಸರಕಾರಿ ವ್ಯವಹಾರಗಳಿಗೆ ಮಾತ್ರ ಅವಕಾಶ ಇರಲಿದೆ. ಎಲ್ಲಾ ಎಟಿಎಂಗಳಲ್ಲಿ ಹಣ ಇರುವಂತೆ ಬ್ಯಾಂಕ್‌ಗಳು ಖಾತರಿ ಪಡಿಸಬೇಕು. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಸಾಧ್ಯ ಆದಷ್ಟು ಎಲ್ಲಾ ಬ್ಯಾಂಕ್‌ಗಳು ಗ್ರಾಹಕರಿಗೆ ಡಿಜಿಟಲ್ ಪಾವತಿಗೆ ಪ್ರೋತ್ಸಾಹ ನೀಡುತ್ತಿವೆ. ಶೇ. 95ರಷ್ಟು ಬ್ಯಾಂಕ್ ಗ್ರಾಹಕರಲ್ಲಿ ಕ್ಯೂಆರ್ ಕೋಡ್ ಇರುವುದರಿಂದ ಹಣ ವರ್ಗಾವಣೆ, ಪಾವತಿ ಅಥವಾ ವ್ಯವಹಾರಕ್ಕೆ ಡಿಜಿಟಲ್ ವ್ಯವಸ್ಥೆ ಸಹಕಾರಿಯಾಗಿದೆ’’ ಎಂದು ದ.ಕ. ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಮಾಹಿತಿ ನೀಡಿದ್ದಾರೆ.


‘‘ಕಠಿಣ ಕರ್ಫ್ಯೂ ಇರುವುದರಿಂದ ಗ್ರಾಹಕರು ಬ್ಯಾಂಕ್‌ಗೆ ಬರದಿದ್ದರೂ, ಎಟಿಂಗಳು ಹಾಗೂ ಡಿಜಿಟಲ್ ಸೇವೆಗಳು ಲಭ್ಯ ಹಾಗೂ ಬ್ಯಾಂಕ್ ಅಗತ್ಯ ಸೇವೆ ಎಂದು ಪರಿಗಣಿಸಲಾಗಿರುವುದರಿಂದ ಲಾಕ್‌ಡೌನ್‌ನಲ್ಲಿಯೂ ಕಾರ್ಯ ನಿರ್ವಹಿಸಲಿದೆ. ಎಟಿಎಂ ಇಲ್ಲದೆ, ಡಿಜಿಟಲ್ ವ್ಯವಸ್ಥೆಯೇ ಗೊತ್ತಿಲ್ಲದವರು ತುರ್ತು ಅಗತ್ಯ ಸಂದರ್ಭದಲ್ಲಿ ಮಾತ್ರವೇ ಅವಕಾಶ ಇರುವುದು. ಹಾಗಾಗಿ ಗ್ರಾಹಕರು ಬ್ಯಾಂಕ್‌ಗಳಿಗೆ ಬಂದು ವ್ಯವಹಾರ ನಡೆಸುವಂತದ್ದು ಇರುವುದಿಲ್ಲ. ಹಾಗಿದ್ದರೂ ತುರ್ತು ಸಂದರ್ಭದಲ್ಲಿ ಅಪರಾಹ್ನ 2 ಗಂಟೆಯವರೆಗೆ ಬ್ಯಾಂಕ್ ಗ್ರಾಹಕರಿಗೆ ಸೇವೆ ನೀಡಲಿದೆ’’

* ಪ್ರವೀಣ್, ಲೀಡ್ ಮ್ಯಾನೇಜರ್, ದ.ಕ. ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News