×
Ad

ಗಾಳಿ-ಮಳೆಗೆ ಕಾರ್ಕಳ ತಾಲೂಕಿನಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿ

Update: 2021-04-28 18:36 IST

ಉಡುಪಿ, ಎ.28: ಕಳೆದೆರಡು ದಿನಗಳಿಂದ ಸಂಜೆ ವೇಳೆ ಗಾಳಿಯೊಂದಿಗೆ ಸುರಿಯುತ್ತಿರುವ ಭಾರೀ ಮಳೆಯಿಂದ ಕಾರ್ಕಳ ತಾಲೂಕಿನಲ್ಲಿ ಹತ್ತಕ್ಕೂ ಮನೆಗಳಿಗೆ ಹಾನಿಯಾದ ವರದಿಗಳು ಬಂದಿದ್ದು, ಅಪಾರ ನಷ್ಟ ಸಂಭವಿಸಿದೆ.

ಮಾಳ ತಾಲೂಕಿನ ಸತೀಶ್ ಮೂಲ್ಯ ಎಂಬವರ ಮನೆ ನಿನ್ನೆ ಬೀಸಿದ ಗಾಳಿ ಮಳೆಗೆ ಸಂಪೂರ್ಣವಾಗಿ ಹಾನಿಗೊಂಡಿದ್ದು ಸುಮಾರು ಎರಡು ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ದುರ್ಗಾ ಗ್ರಾಮದ ಗುಲಾಬಿ ಪೂಜಾರ್ತಿ ಹಾಗೂ ವಿಠಲ ಶೆಟ್ಟಿ ಇವರ ವಾಸ್ತವ್ಯದ ಮನೆಗಳಿಗೆ, ಹೆರ್ಮುಂಡೆ ಗ್ರಾಮದ ಮುಕುಂದ ನಾಯಕ್ ಎಂಬವರ ಮನೆಗೂ ತಲಾ 30 ಸಾವಿರ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿದೆ.

ಕೆವಾರ್ಶೆ ಗ್ರಾಮದ ಅಂಗರ ಗೌಡ, ನಾರಾಯಣ ಮೂಲ್ಯ, ನಾರಾಯಣ ಪೂಜಾರಿ, ಹೊನ್ನಯ್ಯ ಆಚಾರ್ಯ, ಸುಂದರ ಮೂಲ್ಯ ಹಾಗೂ ಮಾಳ ಗ್ರಾಮದ ಲೋಕಯ್ಯ ಪೂಜಾರಿ ಇವರ ಮನೆಗಳಿಗೂ ಗಾಳಿ-ಮಳೆಯಿಂದ ತಲಾ 30ರಿಂದ 40,000ರೂ.ಗಳಷ್ಟು ನಷ್ಟ ಉಂಟಾದ ಬಗ್ಗೆ ಕಾರ್ಕಳ ತಾಲೂಕು ಕಚೇರಿಗೆ ಮಾಹಿತಿ ಬಂದಿದೆ.

ಇಂದು ಬೆಳಗ್ಗೆ 8:00ಗಂಟೆಗೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯ ಹೆಬ್ರಿಯಲ್ಲಿ 23ಮಿ.ಮೀ., ಕಾರ್ಕಳದಲ್ಲಿ 15ಮಿ.ಮೀ., ಉಡುಪಿಯಲ್ಲಿ 12 ಮಿ,ಮೀ., ಬ್ರಹ್ಮಾವರ ಮತ್ತು ಕಾಪುವಿನಲ್ಲಿ ತಲಾ 5ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News