​ಕೋವಿಡ್: ಹಿರಿಯ ನಾಗರಿಕರ ಸಹಾಯಕ್ಕಾಗಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಿಂದ ಹೆಲ್ಪ್ಲೈನ್

Update: 2021-04-28 13:37 GMT

ಉಡುಪಿ, ಎ.28: ದೊಡ್ಡಣಗುಡ್ಡೆಯಲ್ಲಿರುವ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯು ಕಳೆದ ವರ್ಷ ಕೋವಿಡ್-19ರ ಸಂದರ್ಭದಲ್ಲಿ ಮಾಡಿದಂತೆ ಈ ಬಾರಿಯೂ ಸಂಕಷ್ಟದಲ್ಲಿರುವ ವೃದ್ಧರು ಮತ್ತು ಅಸಹಾಯಕರಿಗೆ 24/7 ಹೆಲ್ಪ್ ಲೈನ್ ಸಹಾಯವಾಣಿಯನ್ನು ಮತ್ತೆ ಪ್ರಾರಂಭಿಸಿದೆ.

ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದೊಂದಿಗೆ ಆರಂಭಿಸಿರುವ ಈ ಸಹಾಯವಾಣಿಯ ಭಾಗವಾಗಿ ವೃದ್ಧರು, ಅಸಹಾಯಕರಿಗೆ ಉಡುಪಿ ಜಿಲ್ಲೆಯಾದ್ಯಂತ ಅವರವರ ಪ್ರದೇಶದಲ್ಲಿ ಸಹಾಯ ಒದಗಿಸಲು ಸ್ವಯಂಸೇವಕರನ್ನು ನೋಂದಾಯಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ, ನಾಡಿನ ಖ್ಯಾತನಾಮ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

ಹೆಲ್ಪ್ಲೈನ್ ಸಂಖ್ಯೆ: 9538886293. ಮನೆಯಲ್ಲಿ ಏಕಾಂಗಿಯಾಗಿದ್ದು ಅಥವಾ ಸುರಕ್ಷತೆಯ ಕಾರಣಕ್ಕೆ ಹೊರಗೆ ತೆರಳಲು ಆಗದ ಸಹಾಯ ಇಲ್ಲದ ವೃದ್ಧರು ಹಾಗೂ ಕೊರೋನ ಕಾರಣಕ್ಕೆ ಐಸೋಲೇಷನ್‌ನಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು, ಔಷಧಿಗಳ ಕೊರತೆ ಇದ್ದರೆ ಅದನ್ನು ತಂದುಕೊಡುವ ಅಥವಾ ಅವರ ತುರ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ಹಾಗೂ ಈ ಅಸಹಾಯಕರಿಗೆ ಧೈರ್ಯ ತುಂಬುವ ಜವಾಬ್ದಾರಿ ವಹಿಸಿಕೊಳ್ಳಲು ಆಸಕ್ತಿ ಇರುವ ಯುವಕ-ಯುವತಿಯರು ಸ್ವಯಂಸೇವಕರಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ 9538886291/9538886293 ಸಂಪರ್ಕಿಸಬಹುದು.

ಕೊರೋನ ಕಾರಣಕ್ಕೆ ಭಯ, ಆತಂಕಗಳಿರುವವರು, ಈ ಬಗ್ಗೆ ಖಚಿತ ಮಾಹಿತಿಗಳಿಲ್ಲದೇ ಇರುವವರು ಕೂಡ ಈ ಹೆಲ್ಪ್ಲೈನ್‌ನ ಸಹಾಯ ಪಡೆಯ ಬಹುದು. ಕೊರೋನಾ ರೋಗಸ್ಥಿತಿ ಗಂಭೀರವಾಗುತ್ತಾ ಸಾಗುತ್ತಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕರಲ್ಲಿ ಅನಗತ್ಯ ಭಯ, ಆತಂಕ ಅಥವಾ ಗೊಂದಲ ಉಂಟಾಗದಂತೆ ವೈದ್ಯಕೀಯ ಸೌಲಭ್ಯ, ಜಿಲ್ಲಾಡಳಿತ ಮತ್ತು ವಿವಿಧ ಸರಬರಾಜುದಾರರ ನಡುವೆ ಸಂವಹನ ಬಿಂದುವಾಗಿ ಕಾರ್ಯಾಚರಿಸುವ ಉದ್ದೇಶವನ್ನು ಈ ಹೆಲ್ಪ್ಲೈನ್ ಹೊಂದಿೆ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News