×
Ad

ವೈದ್ಯಕೀಯ ಅಗತ್ಯಕ್ಕೆ ಆಕ್ಸಿಜನ್ ಸಿಗುವಂತಾಗಲು ಹರ್ಯಾಣದ ಫ್ಯಾಕ್ಟರಿ ಮುಚ್ಚಿದ ಮಾರುತಿ ಸುಝುಕಿ

Update: 2021-04-28 20:22 IST

ಹೊಸದಿಲ್ಲಿ: ವೈದ್ಯಕೀಯ ಅಗತ್ಯಗಳಿಗಾಗಿ ಆಮ್ಲಜನಕ ಲಭ್ಯವಾಗಲಿ ಎಂಬ ಉದ್ದೇಶದಿಂದ ಹರಿಯಾಣದಲ್ಲಿರುವ ಫ್ಯಾಕ್ಟರಿಗಳನ್ನು ಮುಚ್ಚಲಾಗುವುದು ಎಂದು  ಬುಧವಾರ ಮಾರುತಿ ಸುಝುಕಿ ಪ್ರಕಟಿಸಿದೆ.

"ಕಾರು ಉತ್ಪಾದನಾ ಪ್ರಕ್ರಿಯೆಯ ಭಾಗವಾಗಿ, ಮಾರುತಿ ಸುಝುಕಿ ತನ್ನ ಕಾರ್ಖಾನೆಗಳಲ್ಲಿ ಅಲ್ಪ ಪ್ರಮಾಣದ ಆಮ್ಲಜನಕವನ್ನು ಬಳಸುತ್ತದೆ, ಆದರೆ ತುಲನಾತ್ಮಕವಾಗಿ ದೊಡ್ಡ ಪ್ರಮಾಣದಲ್ಲಿ ಓಂಪೊನೆಂಟ್‌ಗಳ ತಯಾರಕರು ಬಳಸುತ್ತಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಲಭ್ಯವಿರುವ ಎಲ್ಲಾ ಆಮ್ಲಜನಕವನ್ನು ಜೀವ ಉಳಿಸಲು ಬಳಸಬೇಕೆಂದು ನಾವು ನಂಬಿದ್ದೇವೆ”ಎಂದು ಕಂಪನಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News