ಮುಸ್ಲಿಂ ಜಮಾಅತ್ ನಿಂದ ತುರ್ತು ಸೇವಾ ತಂಡಕ್ಕೆ ಚಾಲನೆ, ಕಿಟ್ ವಿತರಣೆ

Update: 2021-04-28 16:30 GMT

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಕೋವಿಡ್ 19 ಎರಡನೇ ಅಲೆಯ ಈ ಸಂದರ್ಭದಲ್ಲಿ ಸರ್ವ ವಿಧ ಸೇವೆಗಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈ ಎಸ್ ಹಾಗೂ ಎಸ್ಸೆಸ್ಸೆಫ್ ಕಾರ್ಯಕರ್ತರನ್ನೊಳಗೊಂಡ ತುರ್ತು ಸೇವಾ ತಂಡವನ್ನು ರಚಿಸಿದ್ದು, ಅದರ ಘೋಷಣಾ ಸಮಾವೇಶ ನಾಳೆ ನಡೆಯಲಿದೆ. ರಾಜ್ಯ ಕೆ ಎಂ ಜೆ ಉಪಾಧ್ಯಕ್ಷ ಸಾಗರ ಮುಹಮ್ಮದ್ ಹಾಜಿಯ ಸಹಕಾರದೊಂದಿಗೆ ದಕ್ಷಿಣ ಕನ್ನಡ ಮುಸ್ಲಿಂ ಜಮಾಅತ್ ನ ಎಲ್ಲಾ  ತಾಲೂಕು ಸಮಿತಿಗಳ ಮೂಲಕ ಅರ್ಹರಿಗೆ ತಲುಪುವಂತೆ ಕಿಟ್ ವಿತರಣಾ ಕಾರ್ಯಕ್ರಮವು ಎ. 29 ಗುರುವಾರ ಬೆಳಗ್ಗೆ 7.30 ಘಂಟೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಎಲ್ಲರಿಗೂ ಸಿಲ್ ಸಿಲಾ ಮೀಡಿಯಾ ಲೈವ್ ಮೂಲಕ ನೋಡುವಂತಹ ವ್ಯವಸ್ಥೆ ಕಲ್ಪಿಸಲಾಗಿದೆ.

ಇತರ ಜಿಲ್ಲೆಯಲ್ಲಿಯೂ ಕೋವಿಡ್19 ಗೆ ತತ್ತರಿಸಿದ ಜನತೆಗೆ ಆಹಾರ ಕಿಟ್ ಹಾಗೂ ಅಹವಾಲುಗಳಿಗೆ ಸ್ಪಂದಿಸಲು ಸೇವಾ ತಂಡವನ್ನೂ ಸಜ್ಜುಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಯಲ್ಲಿ  ತುರ್ತು ಸಂದರ್ಭ ಬಂದೊದಗಿದರೆ ನಮ್ಮ ಎಲ್ಲಾ ದೀನಿ ಸೇವಾ ಕೇಂದ್ರ ಗಳನ್ನೂ ಎಲ್ಲಾ ವೈದ್ಯಕೀಯ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಸೌಲಭ್ಯಗಳ ವ್ಯವಸ್ಥೆಗೊಳಿಸಿ ಇಲ್ಲಿನ ಜಿಲ್ಲಾಡಳಿತ ಕ್ಕೆ ಸಹಕರಿಸಲು ಸಾವಿರಕ್ಕಿಂತಲೂ ಮಿಕ್ಕ ತುರ್ತು ಸೇವಾ ಕಾರ್ಯಕರ್ತರ ತಂಡವನ್ನು ರಚಿಸಿದ್ದು ಯಾವುದೇ ಸಂದರ್ಭದಲ್ಲಿಯೂ ಕಾರ್ಯಾಚರಣೆಗಿಳಿಯಲೂ  ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಂ ಶಾಫಿ ಸಅದಿ ನೇತ್ರತ್ವದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ ಎಂ ಜೆ ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News