ಸಚಿವ ಕತ್ತಿ ವಿರುದ್ಧ ಕ್ರಮಕ್ಕೆ ಡಿವೈಎಫ್‌ಐ ಆಗ್ರಹ

Update: 2021-04-28 17:15 GMT

ಮಂಗಳೂರು, ಎ.28: ಕೊರೋನ ಸೋಂಕು ನಿಯಂತ್ರಿಸುವಲ್ಲಿ ವೈಫಲ್ಯ ಕಂಡಿರುವ ರಾಜ್ಯ ಸರಕಾರ ಕನಿಷ್ಠ ಪಕ್ಷ ರಾಜ್ಯದ ಜನತೆಗೆ ಆಹಾರ ಹಾಗೂ ಆರೋಗ್ಯ ಖಾತ್ರಿಪಡಸದೆ ಲಾಕ್‌ಡೌನ್ ಹೇರಿ ಸಂಕಷ್ಟಕ್ಕೆ ದೂಡಿದೆ. ಈ ಮಧ್ಯೆ ಪಡಿತರ ಕಡಿತ ಮಾಡಿರುವುದನ್ನು ಪ್ರಶ್ನಿಸಿದ ಜನರಿಗೆ ‘ಸತ್ತುಹೋಗಿ’ ಎಂದು ಹೇಳಿ ಸಮರ್ಥಿಸಿಕೊಂಡಿರುವ ಸರಕಾರದ ಆಹಾರ ಮಂತ್ರಿ ಉಮೇಶ್ ಕತ್ತಿ ನಡವಳಿಕೆ ಅಕ್ಷ್ಯಮ್ಯವಾದುದು. ಹಾಗಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಕ್ಷಣ ಸಚಿವ ಕತ್ತಿಯನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News