ಮೂಳೂರು: ರಂಝಾನ್ ಕಿಟ್ ವಿತರಣೆ

Update: 2021-04-29 17:45 GMT

ಕಾಪು : ಅಲ್ ಖಮರ್ ಟ್ರಸ್ಟ್  ಮೂಳೂರು  ಇದರ ವತಿಯಿಂದ ಪ್ರತೀ ವರ್ಷದಂತೆ ಈ ಸಲವೂ ಕೂಡ 100 ಬಡ ಕುಟುಂಬಗಳಿಗೆ ರಂಝಾನ್ ಕಿಟ್‍ನ್ನು ವಿತರಿಸಲಾಯಿತು.

ಮೂಳೂರು ಜುಮ್ಮಾ ಮಸೀದಿಯ ಖತೀಬಾರದ ಅಲ್ ಹಜ್ ಅಬ್ದುಲ್  ರಹ್ಮಾನ್  ಮದನಿ ಉಸ್ತಾದರು ದುವಾದೊಂದಿಗೆ ಕಿಟ್ ವಿತರಣೆಗೆ ಚಾಲನೆಯನ್ನು ನೀಡಿದರು.

ಮಸೀದಿಯ ಉಪಾಧ್ಯಕ್ಷ ಜಿ. ಎಂ. ಉಮ್ಮರಬ್ಬ, ಮದ್ರಸ ಉಪಾಧ್ಯಕ್ಷ ಬಾವ ವೈಬಿಸಿ,  ಅಲ್ ಖಮರ್ ಟ್ರಸ್ಟ್  ಮೂಳೂರು ಕಾರ್ಯದರ್ಶಿ ಅಬ್ದುಲ್ ಹಮೀದ್ ಯೂಸುಫ್, ಕೋಶಾಧಿಕಾರಿ ಸೆಯ್ಯದ್ ಮುರಾದ್ ಆಲಿ, ಸದಸ್ಯರುಗಳಾದ ವಹಾಬ್ ಅಬ್ದುಲ್ ರಝಕ್, ಅಬ್ದುಲ್ ಸಲಾಂ ಮೊಹಮ್ಮದ್ ಮತ್ತು ಶಂಸುದ್ಧಿನ್ ಬಾರೂದು ರವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News