ಮಂಗಳೂರಿನ ‌ಸೆಂಟ್ರಲ್‌ ಮಾರ್ಕೆಟ್ ಸಂಪೂರ್ಣ ಬಂದ್

Update: 2021-04-30 05:47 GMT

ಮಂಗಳೂರು : ನಿನ್ನೆ ಬೆಳಗ್ಗೆ ವಿನಾಯಿತಿ ಅವಧಿಯಲ್ಲಿ ಜನ‌ರಿಂದ‌ ತುಂಬಿ ತುಳುಕಿದ್ದ ಸೆಂಟ್ರಲ್ ಮಾರ್ಕೆಟ್ ಇಂದು ಸ್ತಬ್ಧವಾಗಿತ್ತು.

ನಿನ್ನೆ ಬೆಳಗ್ಗೆ 10 ಗಂಟೆಯವರೆಗೂ ಜನ ಜಂಗುಳಿಯಿಂದ ಕೂಡಿದ್ದ ಮಾರ್ಕೆಟ್ ಮಾಸ್ಕ್ ಇಲ್ಲದೆ, ಸುರಕ್ಷಿತ ಅಂತರ ಇಲ್ಲದೆ ವ್ಯಾಪಾರ ಹಾಗೂ ಜನಜಂಗುಳಿಯ ಕಾರಣ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ನಿನ್ನೆ ಆದೇಶ ಹೊರಡಿಸಿ ಬೈಕಂಪಾಡಿ ಎಪಿಎಂಸಿಯಲ್ಲೇ ರಖಂ ವ್ಯಾಪಾರ ಮಾಡಲು ಸೂಚಿಸಿದ್ದರು. ಹಾಗಾಗಿ‌ ಇಂದು ಮಾರ್ಕೆಟ್ ಸುತ್ತ ಬ್ಯಾರಿಕೇಡಿ ಹಾಕಿದ ಪೊಲೀಸರು ಸೆಂಟ್ರಲ್ ಮಾರುಕಟ್ಟೆ ಪ್ರವೇಶಿಸದಂತೆ  ಬಂದ್ ಮಾಡಿದ್ದಾರೆ.

ಕೇಂದ್ರ ಮಾರುಕಟ್ಟೆ ಯಲ್ಲಿ ವ್ಯಾಪಾರ ಬಂದ್ ಮಾಡಿ ಜಿಲ್ಲಾಧಿಕಾರಿ ನಿನ್ನೆ ಆದೇಶಿಸುವ ಹಿನ್ನೆಲೆಯಲ್ಲಿ ಇಂದು ನಗರದ ಟೌನ್ ಹಾಲ್ ಎದುರು ವ್ಯಾಪಾರ ನಡೆಸಿದ ಸಂದರ್ಭದಲ್ಲಿ ಜನರು ಖರೀದಿಗೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News