ಉಳ್ಳಾಲ : ಕೊರೋನ ಲಸಿಕೆಗೆ ಸರದಿ ಸಾಲಿನಲ್ಲಿ ನಿಂತ ಸ್ಥಳೀಯರು, ಗೊಂದಲದ ವಾತಾವರಣ

Update: 2021-04-30 08:02 GMT

ಉಳ್ಳಾಲ : ಕೊರೋನ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಮೇರೆಗೆ ಉಳ್ಳಾಲ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಕೊರೋನ ಲಸಿಕೆಗೆ ಸ್ಥಳೀಯರು ಸರದಿ ಸಾಲಿನಲ್ಲಿ ನಿಂತ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಘಟನೆ ವಿವರ: ಕೊರೋನ ಲಸಿಕೆ ಪಡೆಯಲು ಉಳ್ಳಾಲ ವ್ಯಾಪ್ತಿಯ ಜನರು ಎಂದಿನಂತೆ ಆಸ್ಪತ್ರೆಗೆ ಶುಕ್ರವಾರ ಮುಂಜಾನೆಯೇ ಜಮಾಯಿಸಿದ್ದರು. ಈ ವೇಳೆ ವೈದ್ಯರು ಲಸಿಕೆ ಬೇಕಾದವರು ಆನ್ ಲೈನ್ ಬುಕಿಂಗ್ ಮಾಡಬೇಕು. ದಿನಕ್ಕೆ 50 ಮಂದಿಗೆ ಮಾತ್ರ ಅವಕಾಶ ಎಂದು ಸೂಚಿಸಿದರೆನ್ನಲಾಗಿದೆ. ಇದೇ ವಿಚಾರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಬಗ್ಗೆ ಮೊದಲೇ ಸೂಚಿಸದ ಕಾರಣ ಇಂದು ಎಲ್ಲರಿಗೂ ನೀಡಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ವಾರ್ತಾ ಭಾರತಿ ಜತೆ ಮಾತು ಹಂಚಿಕೊಂಡ ಸ್ಥಳೀಯರು ದಿನ ಕೆ 50 ಮಂದಿಗೆ ಮಾತ್ರ ಲಸಿಕೆ ಪಡೆಯಲು ಅವಕಾಶ ಎಂದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆ ಹೊರಗೆ ಬೊರ್ಡ್ ಹಾಕಬೇಕಿತ್ತು.ಆ ಕೆಲಸ ಮಾಡಲಿಲ್ಲ. ಇದರಿಂದ ಜನರು ಲಸಿಕೆಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ. ಇದೀಗ ಉಪವಾಸ ವೃತ ದೊಂದಿಗೆ ಹಿರಿಯರು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಸರ್ಕಾರದ ಆದೇಶ  ಪ್ರಕಾರ  10 ಗಂಟೆ ಯವರೆಗೆ ಮಾತ್ರ ಅವಕಾಶ ಇದೆ. ಆದರೆ ಇಲ್ಲಿ 10 ಗಂಟೆ ಕಳೆದರೂ ಜನ ಕದಲಲಿಲ್ಲ.  ಹಿರಿಯರಿಗಂತೂ ತೊಂದರೆ ಅನುಭವಿಸುವಂತಾಗಿದೆ ಇದಕ್ಕೆ ಯಾರು ಹೊಣೆ ? ಆಸ್ಪತ್ರೆ ಸಿಬ್ಬಂದಿ ಕೊರೋನ ಲಸಿಕೆ ವಿತರಣೆ ಬಗ್ಗೆ ರೂಪುರೇಷೆ ಸಿದ್ಧಪಡಿಸಲಿ ಎಂದು ಆಗ್ರಹಿಸಿದರು.

ಲಸಿಕೆ ಪಡೆಯಲು ಎಷ್ಟು ಜನ ದಿನ ಕೆ ಬರಬೇಕು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಬೇಕಿತ್ತು. ಇಲ್ಲದಿದ್ದರೆ ಆಸ್ಪತ್ರೆ ಮುಂಭಾಗ ದಲ್ಲಿ ಬೋರ್ಡ್ ಹಾಕಬೇಕಿತ್ತು. ದಿನಕ್ಕೆ 50 ಜನರಿಗೆ ಮಾತ್ರ ಲಸಿಕೆ ನೀಡುವ ವಿಚಾರ ಜನರಿಗೆ ಗೊತ್ತಿರಲಿಲ್ಲ. ಈ ಕಾರಣದಿಂದ ಏಕಕಾಲಕ್ಕೆ ಜನರು ಸೇರಿದ್ದಾರೆ.ಇದರಲ್ಲಿ ಹಿರಿಯರು, ವಯಸ್ಕರು ಇದ್ದಾರೆ. ಅವರಿಗೆ ತೊಂದರೆ ಆಗಿದೆ.

- ಮಹಮ್ಮದ್ ಮುಕಚೇರಿ, ನಗರ ಸಭಾ ಸದಸ್ಯ

ನಮಗೆ 10 ವೈಯಲ್ಸ್ ಲಸಿಕೆ ಮಾತ್ರ ದಿನಕ್ಕೆ ಬರುತ್ತದೆ. ಅದನ್ನು 60 ಜನರಿಗೆ ಮಾತ್ರ ಕೊಡಲು ಸಾಧ್ಯ ಆಗುತ್ತದೆ. ಏಕಕಾಲದಲ್ಲಿ 200 ಜನ ಬಂದರೆ ಎಲ್ಲರಿಗೂ ಹೇಗೆ ಲಸಿಕೆ ಕೊಡಲು ಸಾಧ್ಯ ? ಎರಡು ತಿಂಗಳ ಹಿಂದೆ ಲಸಿಕೆ ತೆಗೆದು ಕೊಳ್ಳಲು ಸೂಚಿಸಿದ್ದೆ. ಆಗ ಯಾರೂ ಕೂಡ ಬರಲಿಲ್ಲ. ಈಗ ಒಮ್ಮೆಲೇ ಬರುತ್ತಾರೆ. ಲಸಿಕೆ ಉಳ್ಳಾಲದಲ್ಲೇ ತೆಗೆದು ಕೊಳ್ಳಬೇಕೆಂದೇನು ಇಲ್ಲ. ಎಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು.
- ಡಾ.ಪ್ರಶಾಂತ್ ವೈದ್ಯಾಧಿಕಾರಿ, ಉಳ್ಳಾಲ ಸರ್ಕಾರಿ ಆಸ್ಪತ್ರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News