×
Ad

ಕರ್ನಾಟಕ ಮುಸ್ಲಿಂ ಜಮಾಅತ್‌ ; 'ಸಹಾಯ್' ತುರ್ತು ಸೇವಾ ತಂಡಕ್ಕೆ ಚಾಲನೆ

Update: 2021-04-30 15:46 IST

ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದಲ್ಲಿ ರಾಜ್ಯಾದ್ಯಂತ ಕಾರ್ಯಾಚರಿಸಲಿರುವ 'ಸಹಾಯ್'  ತುರ್ತು ಸೇವಾ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು.

ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಸಭೆಯನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸ‌ಅದಿ ಬೆಂಗಳೂರು ವಿಷಯ ಮಂಡಿಸಿ, ತುರ್ತು ಸೇವಾ ತಂಡದ ಅನಿವಾರ್ಯತೆ, ಕಾರ್ಯಾಚರಣೆ ಹಾಗೂ ಯೋಜನೆಗಳ ಕುರಿತು ಸಮಗ್ರವಾಗಿ ವಿವರಿಸಿದರು.

ಆಧ್ಯಾತ್ಮಿಕ ನಾಯಕರೂ, ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರೂ ಆದ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ರವರು 'ಸಹಾಯ್' ತುರ್ತು ಸೇವಾ ತಂಡದ ಹೆಸರು ಮತ್ತು ಲೋಗೋ ಬಿಡುಗಡೆಗೊಳಿಸಿದರು.

ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ರವರು 'ಸಹಾಯ್' ಜಿಲ್ಲಾ ತಂಡವನ್ನು ಘೋಷಿಸಿದರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳರವರು 'ಸಹಾಯ್' ತುರ್ತು ಸೇವಾ ತಂಡದ ಸಾಮಾಜಿಕ ಜಾಲತಾಣದ ವಿವಿಧ ಖಾತೆಯನ್ನು ಅನಾವರಣಗೊಳಿಸಿದರು. ಬೇಕಲ್ ಉಸ್ತಾದರ ಪುತ್ರ ಅಬ್ದುಲ್ ಜಲೀಲ್ ಬ್ರೈಟ್ ತುರ್ತು ಸೇವಾ ತಂಡದ ಸರ್ಕಲ್ ವಿಭಾಗಕ್ಕೆ ಪಿಪಿಇ ಕಿಟ್ ವಿತರಣೆ ಮಾಡಿದರು. ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ಕಿಟ್ ವಿತರಣೆ ಮಾಡಿದರು.

'ಸಹಾಯ್' ತುರ್ತು ಸೇವಾ ತಂಡವು ಜಿಲ್ಲಾ ವ್ಯಾಪ್ತಿಯಲ್ಲಿ ಹನ್ನೊಂದು ಸರ್ಕಲ್ ಗಳ ಅಧೀನದಲ್ಲಿ ಕಾರ್ಯಾಚರಿಸಲಿದ್ದು, ತುರ್ತಾಗಿ ಸಂಪರ್ಕಿಸಬೇಕಾದ ನಂಬರನ್ನು ಬಿಡುಗಡೆಗೊಳಿಸಲಾಯಿತು. 'ಸಹಾಯ್' ತುರ್ತು ಸೇವಾ ತಂಡದ ಜಿಲ್ಲಾ ಕೋಡಿನೇಟರ್ ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿ, ರಾಜ್ಯ ಕೋಡಿನೇಟರ್ ಅಶ್ರಫ್ ಕಿನಾರ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News