ಉದ್ಯೋಗ ಖಾತ್ರಿ ಯೋಜನೆ ಕೂಲಿಕಾರರಿಗೆ ಕಾನೂನು ಬದ್ಧ ಕನಿಷ್ಟ ಕೂಲಿ ನೀಡಲು ಆಗ್ರಹ

Update: 2021-04-30 13:27 GMT

ಬೈಂದೂರು, ಎ.30: ಕರ್ನಾಟಕ ಸರಕಾರ ಕೃಷಿ ಕಾರ್ಮಿಕರಿಗೆ 424.80 ರೂ. ಕನಿಷ್ಟ ದಿನಕೂಲಿ ನೀಡುತಿದ್ದರೆ, ಕೇಂದ್ರ ಸರಕಾರ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ 289.00 ರೂ. ಕನಿಷ್ಟ ದಿನಗೂಲಿಯನ್ನು ನಿಗದಿಗೊಳಿಸಿದೆ. ಇದರಿಂದ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೆ ಸರಕಾರ ಅನ್ಯಾಯ ಮಾಡಿದಂತಾಗಿದೆ. ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲುಯು)ದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ತೀವ್ರವಾಗಿ ಖಂಡಿಸಿದ್ದಾರೆ.

ಸಂಘದ ರಾಜ್ಯ ಸಮಿತಿ ಕರೆಯಂತೆ ‘ಬೇಡಿಕೆ ದಿನಾಚರಣೆ’ಯ ಅಂಗವಾಗಿ ಇಂದು ಬೈಂದೂರಿನ ಕೆರ್ಗಾಲ್ ಗ್ರಾಮದಲ್ಲಿ ನಡೆದ ಕೃಷಿ ಕೂಲಿಕಾರರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಅಕುಶಲ ಕೆಲಸದಲ್ಲಿ ಕಾರ್ಮಿಕರ ಎರಡು ಗುಂಪುಗಳ ಕೂಲಿಯ ವಿಷಯ ದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಾರತಮದ ನೀತಿಯನ್ನು ಅನುಸರಿಸುತ್ತಿವೆ ಎಂದವರು ಟೀಕಿಸಿದರು.

 ಈ ಸಂದರ್ಭದಲ್ಲಿ ಕೂಲಿಕಾರರ ಸಂಘದ ಮುಖಂಡರೂ,ಕಾಯಕ ಬಂಧು ಸಾಕು, ಸುಶೀಲ, ಜಯಂತಿ ಮತ್ತು ವೀಣಾ ಉಪಸ್ಥಿತರಿದ್ದರು. ಪ್ರಸಕ್ತ ವರದಿ ವರ್ಷದಲ್ಲಿ ನರೇಗಾ ಕೂಲಿಕಾರರ ಹಕ್ಕಿನ 100 ದಿನಗಳ ಕೆಲಸ ಕಡ್ಡಾಯವಾಗಿ ಸಂಪೂರ್ಣ ಪಡೆಯಲೇಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News