ಸಮಸ್ತ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ: ಆತೂರು ರೇಂಜ್ ನಲ್ಲಿ ಆತೂರುಬೈಲು ಪ್ರಥಮ
Update: 2021-04-30 19:30 IST
ಕಡಬ : ಸಮಸ್ತ ಕೇರಳ ಇಸ್ಲಾಂ ಮತ ವಿಧ್ಯಾಬ್ಯಾಸ ಬೋರ್ಡ್ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಆತೂರುಬೈಲು ಮದ್ರಸಕ್ಕೆ ಶೇಕಡಾ 100 ಫಲಿತಾಂಶ ದೊರೆತಿದೆ.
ಆತೂರು ರೇಂಜ್ ಮಟ್ಟದಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದ ಸರೀನಾ ಆತೂರುಬೈಲು ಪ್ರಥಮ ಹಾಗೂ ಮುಝೈನಾ ಆತೂರುಬೈಲು ದ್ವಿತೀಯ ಸ್ಥಾನ ಪಡೆದು ಮದ್ರಸದ ಕೀರ್ತಿ ಹೆಚ್ಚಿಸಿದ್ದಾರೆ.
ಏಳು ಮತ್ತು ಐದನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ನೂರು ಶೇಕಡಾ ಫಲಿತಾಂಶ ಲಭಿಸಿದೆ ಎಂದು ಮದ್ರಸ ಸದರ್ ಉಸ್ತಾದರಾದ ಇಬ್ರಾಹಿಂ ಕೌಸರಿ ಮುಂಡೋಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.