×
Ad

ಮನಪಾ ವ್ಯಾಪ್ತಿಯಲ್ಲಿ ಪೌರ ಘನ ತ್ಯಾಜ್ಯ ನಿಯಮ ಅನುಷ್ಠಾನ: ಅಕ್ಷಯ್ ಶ್ರೀಧರ್

Update: 2021-04-30 21:01 IST

ಮಂಗಳೂರು, ಎ.30: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಘನತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಲುವಾಗಿ ಕರ್ನಾಟಕ ಪೌರ ಘನ ತ್ಯಾಜ್ಯ ನಿಯಮವನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದರು.

ಈ ನಿಯಮದಂತೆ ಪಾಲಿಕೆ ವ್ಯಾಪ್ತಿಯೊಳಗಿನ ಬೃಹತ್ ತ್ಯಾಜ್ಯ ಉತ್ಪಾದಕರಾದ ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ಗಳು, ವಿದ್ಯಾರ್ಥಿ ನಿಲಯಗಳು, ಶಿಕ್ಷಣ ಸಂಸ್ಥೆಗಳು, ಹೊಟೇಲ್‌ಗಳು, ಬಾರ್‌ಆ್ಯಂಡ್ ರೆಸ್ಟೋರೆಂಟ್‌ಗಳು, ಕಲ್ಯಾಣ ಮಂಟಪಗಳು, ಕ್ಯಾಟರಿಂಗ್‌ಗಳು, ಕೋಳಿ ಮಾರಾಟಗಾರರು, ಸಣ್ಣ ಕೈಗಾರಿಕೆಗಳು, ಬಿಲ್ಡರ್‌ಗಳು ಹಾಗೂ ಇತರರಿಗೆ ತ್ಯಾಜ್ಯವನ್ನು ವಿಂಗಡಿಸಿ, ಮೂಲದಲ್ಲಿಯೇ ತ್ಯಾಜ್ಯ ಸಂಸ್ಕರಿಸುವ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಲು ಸೂಚನೆ ನೀಡಲಾಗಿದೆ. ಕೆಲವು ಸಂಸ್ಥೆಯವರು ಮಾತ್ರ ಘಟಕವನ್ನು ಸ್ಥಾಪಿಸಿದ್ದಾರೆ. ಆದರೆ ಹೆಚ್ಚಿನವರು ಇನ್ನೂ ತ್ಯಾಜ್ಯ ಸಂಸ್ಕರಿಸುವ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಮೇ 15ರೊಳಗೆ ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಬೇಕು ಎಂದರು.

ಹಸಿ ಕಸ ಸಂಸ್ಕರಣೆಗೆ ತಂತ್ರಜ್ಞ್ಞಾನವನ್ನು ಬಳಸಲು ಹಸಿರು ನ್ಯಾಯ ಪೀಠ ರಾಜ್ಯ ಮಟ್ಟದ ಸಮಿತಿಯು ಸರಕಾರೇತರ ಸಂಸ್ಥೆಗಳ, ಸ್ವಾಯತ್ತ ಸಂಸ್ಥೆಗಳ ಪಟ್ಟಿಯನ್ನು ಒದಗಿಸಿದೆ. ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ಉದ್ದೇಶದಿಂದ ತ್ಯಾಜ್ಯ ಉತ್ಪಾದಕರು ಹಾಗೂ ಮನೆಗಳು ಅವಶ್ಯಕತೆಗೆ ಅನುಗುಣವಾಗಿ ತಮ್ಮ ಹಂತದಲ್ಲಿ ಬಳಸಬಹುದಾದ ತಂತ್ರಜ್ಞಾನವನ್ನು ಹೊಂದಿರುವ ಸಂಸ್ಥೆಗಳ ಪಟ್ಟಿಯ ವಿವರವನ್ನು ಪಾಲಿಕೆಯ ವೆಬ್‌ಸೈಟ್ ಠಿಠಿ://ಡಿಡಿಡಿ.ಞಚ್ಞಜಚ್ಝ್ಠ್ಟ್ಠ್ಚಜಿಠಿ.ಞ್ಟ್ಚ.ಜಟ.ಜ್ಞಿ/ನಿಂದ ಪಡೆಯಬಹುದಾಗಿದೆ.

ತ್ಯಾಜ್ಯ ಉತ್ಪಾದಕರು ಹೆಚ್ಚಿನ ಮಾಹಿತಿಗಾಗಿ ಈ ಸಂಸ್ಥೆಯನ್ನು ಅಥವಾ ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ (ದಯಾನಂದ ಪೂಜಾರಿ ಮೊ.ಸಂ:7411842856) ಅಥವಾ ಆರೋಗ್ಯ ವಿಭಾಗ ದೂ.ಸಂ: 0824-2220313-314ನ್ನು ಸಂಪರ್ಕಿಸಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News