ಫ್ರಾನ್ಸ್ ನಲ್ಲಿ ಕೊರೋನ ಭಾರತೀಯ ಪ್ರಭೇದದ ಮೊದಲ ಪ್ರಕರಣ ಪತ್ತೆ
Update: 2021-04-30 21:14 IST
ಪ್ಯಾರಿಸ್ (ಫ್ರಾನ್ಸ್), ಎ. 30: ಕೊರೋನ ವೈರಸ್ ನ ಭಾರತೀಯ ಪ್ರಭೇದದ ಪ್ರಕರಣವೊಂದು ಫ್ರಾನ್ಸ್ ನಲ್ಲಿ ಪತ್ತೆಯಾಗಿದೆ ಎಂದು ಫ್ರಾನ್ಸ್ ನ ನೋವೆಲ್-ಆ್ಯಕ್ವಿಟೇನ್ ರಾಜ್ಯದ ಪ್ರಾದೇಶಿಕ ಆರೋಗ್ಯ ಸಂಸ್ಥೆಯ ನಿರ್ದೇಶಕ ಬೆನಾಯಿಟ್ ಎಲ್ಬೂಡ್ ಗುರುವಾರ ಹೇಳಿದ್ದಾರೆ.
ಭಾರತದಿಂದ ವಾಪಸಾದವರಲ್ಲಿ ಕೊರೋನ ವೈರಸ್ ಇರುವುದು ಪತ್ತೆಯಾಗಿದೆ. ಅದನ್ನು ಸಾಂಕ್ರಾಮಿಕದ ಭಾರತೀಯ ಪ್ರಭೇದ ಎಂಬುದಾಗಿ ನಾವು ಗುರುತಿಸಿದ್ದೇವೆ ಎಂದು ಸ್ಥಳೀಯ ಸುದ್ದಿವಾಹಿನಿಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಫ್ರಾನ್ಸ್ ನಲ್ಲಿ ಕೊರೋನ ವೈರಸ್ ನ ಭಾರತೀಯ ಪ್ರಭೇದ ಈವರೆಗೆ ಪತ್ತೆಯಾಗಿಲ್ಲ ಎಂಬುದಾಗಿ ದೇಶದ ಆರೋಗ್ಯ ಸಚಿವ ಒಲಿವಿಯರ್ ವೆರಾನ್ ಹೇಳಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.