ಮೂಡುಶೆಡ್ಡೆ: ಕುಡಿಯುವ ನೀರಿನ ಕೊಳವೆಬಾವಿಗೆ ಚಾಲನೆ

Update: 2021-04-30 16:13 GMT

ಗುರುಪುರ, ಎ.30: ಮೂಡುಶೆಡ್ಡೆ ಗ್ರಾಪಂ ವ್ಯಾಪ್ತಿಯ ಎದುರುಪದವಿನಲ್ಲಿ ಜಿಪಂನ 12 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಕುಡಿಯುವ ನೀರಿನ ಕೊಳವೆ ಬಾವಿಗೆ ಜಿಪಂ ಮಾಜಿ ಸದಸ್ಯ ಯುಪಿ ಇಬ್ರಾಹಿಂ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮೂಡುಶೆಡ್ಡೆಯಲ್ಲಿ ಕುಡಿಯುವ ನೀರಿನ ನಾಲ್ಕು ಕೊಳವೆಬಾವಿ ಕೊರೆಯಲಾಗಿದೆ. ಜಿಪಂ ವತಿಯಿಂದ ನಡೆಸಲಾದ ಎಲ್ಲ ಯೋಜನೆಗಳ ಕಾರ್ಯಗತದ ಹಿಂದೆ ಸಾರ್ವಜನಿಕರು ಮತ್ತು ಪಂಚಾಯತ್ ಆಡಳಿತ ವರ್ಗದ ಸಹಕಾರ ಇದೆ. ಕೇಂದ್ರದ ಜಲ ಜೀವನ್ ಮಿಶನ್‌ನಡಿ ಕುಡಿಯುವ ನೀರಿನ ಯೋಜನೆ ತರಲು ಅವಕಾಶವಿದ್ದು, ಇದಕ್ಕಾಗಿ ನೂತನ ಪಂಚಾಯತ್ ಆಡಳಿತ ವರ್ಗ ಪ್ರಯತ್ನಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಜಯಶ್ರೀ ಉಪಾಧ್ಯಕ್ಷ ಅನಿಲ್ ಕುಮಾರ್, ಕಾಂಗ್ರೆಸ್‌ನ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ವಿಕಟ್ಟರ್ ಡಿಸೋಜ, ಜಯಂತಿ, ಪ್ರಕಾಶ್ ಮೂಡುಶೆಡ್ಡೆ ಮತ್ತಿತರರು ಉಪಸ್ಥಿತರಿದ್ದರು. ಗ್ರಾಪಂ ಮಾಜಿ ಸದಸ್ಯ ಜೆ ಉಮೇಶ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News