×
Ad

ಟ್ರೋಲ್‍ಗೆ ತೀಕ್ಷ್ಣ ಪ್ರತ್ಯುತ್ತರ ನೀಡಿ ಅಕ್ಷಯ್ ಕುಮಾರ್ ಗೆ ಕುಟುಕಿದ ಕ್ರಿಕೆಟಿಗ ಹರ್ ಪ್ರೀತ್ ಬ್ರಾರ್

Update: 2021-05-01 13:05 IST
ಹರ್ ಪ್ರೀತ್ ಬ್ರಾರ್ (Twitter/IPL)

ಹೊಸದಿಲ್ಲಿ: ಶುಕ್ರವಾರ ರಾತ್ರಿ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ  ಮೂರು ವಿಕೆಟ್ ಕಿತ್ತು ಗಮನ ಸೆಳೆದ ಪಂಜಾಬ್ ಕಿಂಗ್ಸ್ ತಂಡದ ಆಲ್ ರೌಂಡರ್ ಹರ್ ಪ್ರೀತ್ ಬ್ರಾರ್ ಅವರಿಗೆ ತಾವು ಧರಿಸುವ ಪೇಟ ಕುರಿತಂತೆ ಅಪಾರ ಅಭಿಮಾನ ಮತ್ತು ಹೆಮ್ಮೆಯಿದೆ.

ಒಂದು ವಾರದ ಹಿಂದೆ ಟ್ರೋಲ್ ಒಬ್ಬ ಇನ್‍ಸ್ಟಾಗ್ರಾಂನಲ್ಲಿ 25 ವರ್ಷದ ಬ್ರಾರ್ ಅವರನ್ನು "ಸಿಂಗ್ ಈಸ್ ಬ್ಲಿಂಗ್'' ಸಿನೆಮಾದ ಅಕ್ಷಯ್ ಕುಮಾರ್ ಅವರೊಂದಿಗೆ ಹೋಲಿಕೆ ಮಾಡಿದ್ದ. ಇದಕ್ಕೆ ಆಕ್ಷೇಪಿಸಿ "ನಾವು ಹಣಕ್ಕಾಗಿ ಪೇಟ ಧರಿಸುವುದಿಲ್ಲ,'' ಎಂದು ಬ್ರಾರ್ ಬರೆದಿದ್ದಾರೆ.

"ಪಾಜಿ ಆಪ್ ಸಿಂಗ್‍ಈಸ್‍ಬ್ಲಿಂಗ್ ಕೇ ಅಕ್ಷಯ್ ಕುಮಾರ್ ದಿಖ್ತೇ ಹೋ (ನೀವು ಸಿಂಗ್ ಈಸ್ ಬ್ಲಿಂಗ್ ಸಿನೆಮಾದ ಅಕ್ಷಯ್ ಕುಮಾರ್ ಥರ ಕಾಣುತ್ತೀರಿ,'' ಎಂದು  ಒಬ್ಬ ಇನ್‍ಸ್ಟಾಗ್ರಾಂನಲ್ಲಿ ಬರೆದಿದ್ದ.

ಇದಕ್ಕೆ ಪ್ರತಿಕ್ರಿಯಿಸಿದ ಬ್ರಾರ್ "ಪೈಸೆ ಕೆ ಲಿಯೆ ಟರ್ಬನ್ ನಹೀ ಪೆಹೆನ್ತೇ ಹಮ್ (ನಾವು ಹಣಕ್ಕಾಗಿ ಪೇಟ ಧರಿಸುವುದಿಲ್ಲ) #isupportfarmers,'' ಎಂದು ಟ್ವೀಟ್ ಮಾಡಿ ಟ್ರೋಲಿಗನ ಇನ್‍ಸ್ಟಾಗ್ರಾಂ ಪೋಸ್ಟ್ ನ ಸ್ಕ್ರೀನ್ ಶಾಟ್ ಕೂಡ ಶೇರ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News