×
Ad

ರಾಜ್ಯದ ಇಮಾಮ್-ಮುಅದ್ಸಿನ್‌ಗೆ ಗೌರವ ಧನ ಬಿಡುಗಡೆ

Update: 2021-05-01 18:40 IST

ಮಂಗಳೂರು : ರಾಜ್ಯದ 31 ಜಿಲ್ಲೆಗಳ ಮಸೀದಿಗಳಲ್ಲಿ ಸೇವೆ ಸಲ್ಲಿಸುವ ಇಮಾಮ್ ಮತ್ತು ಮುಅದ್ಸಿನ್‌ಗಳಿಗೆ ಮಾರ್ಚ್ ಮತ್ತು ಎಪ್ರಿಲ್ ತಿಂಗಳ ಗೌರವ ಧನವು ಮೇ 10ರೊಳಗೆ ಬಿಡುಗಡೆಯಾಗಲಿದೆ ಎಂದು ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಮೌಲಾನ ಶಾಫಿ ಸಅದಿ ಬೆಂಗಳೂರು ತಿಳಿಸಿದ್ದಾರೆ.

ತಾಂತ್ರಿಕ ಕಾರಣದಿಂದ ಈ ಎರಡು ತಿಂಗಳ ಗೌರವಧನ ಬಿಡುಗಡೆಗೊಳ್ಳಲು ವಿಳಂಬವಾಗಿತ್ತು. ಇದೀಗ ವಕ್ಫ್ ಸಿಇಒ ಅವರ ಜೊತೆ ಮಾತುಕತೆ ನಡೆಸಲಾಗಿದೆ. ಕೋವಿಡ್-ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಇಮಾಮ್-ಮುಅದ್ಸಿನ್‌ರಿಗೆ ಗೌರವಧನ ಶೀಘ್ರ ಕೈ ಸೇರುವಂತಾಗಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News