×
Ad

ಅಪರಿಚಿತ ಯುವಕನ ಮೃತದೇಹ ಪತ್ತೆ

Update: 2021-05-01 20:23 IST

ಮಂಗಳೂರು, ಮೇ 1: ನಗರದ ಬಂದರು ದಕ್ಕೆಯ ರೈಲ್ವೆ ಗೂಡ್ಸ್ ಯಾರ್ಡ್‌ನಲ್ಲಿ ಎ.28ರಂದು ಸುಮಾರು 30 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

5.5 ಅಡಿ ಎತ್ತರವಿರುವ ಸಾಧಾರಣ ಮೈಕಟ್ಟಿನ, ಎಣ್ಣೆಗೆಂಪು ಮೈಬಣ್ಣದ, ಉದ್ದ ಮೂಗು ಹೊಂದಿರುವ ಈ ವ್ಯಕ್ತಿಯು 2 ಇಂಚು ಉದ್ದದ ಕಪ್ಪು ತಲೆಕೂದಲು ಹೊಂದಿದ್ದಾರೆ. ಗಡ್ಡ ಬಿಟ್ಟಿದ್ದಾರೆ. ಕಂದು ಬಣ್ಣದ ತುಂಬು ತೋಳಿನ ಟಿ-ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.

ಈ ಮೃತವ್ಯಕ್ತಿಯ ವಾರಸುದಾರರು ಅಥವಾ ಸಂಬಂಧಿಕರು ಇದ್ದರೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆ (0824-2220559) ಅಥವಾ ಪೊಲೀಸ್ ನಿರೀಕ್ಷಕರನ್ನು (9480800470) ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News