×
Ad

ಬ್ರಹ್ಮ ಕುಮಾರಿ ಟಿವಿ ವಾಹಿನಿಯ ನಿರೂಪಕಿ ಕಾನು ಪ್ರಿಯಾ ಕೋವಿಡ್‍ನಿಂದ ನಿಧನ

Update: 2021-05-01 22:53 IST

ಹೊಸದಿಲ್ಲಿ: ಬ್ರಹ್ಮಕುಮಾರಿ ಟಿವಿ ವಾಹಿನಿಯ ನಿರೂಪಕಿ  ಕಾನು ಪ್ರಿಯಾ ಅವರು ಕೋವಿಡ್-19 ನಿಂದಾಗಿ ನಿಧನರಾಗಿದ್ದಾರೆ.

ಸಿಸ್ಟರ್ ಬಿಕೆ ಶಿವಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 

ಕಾನು ಪ್ರಿಯಾ ಅವರು ಸುದ್ದಿ ನಿರೂಪಕಿ, ನಟಿ ಹಾಗೂ ಚಿತ್ರ ನಿರ್ಮಾಪಕಿಯಾಗಿದ್ದರು. ಕೋವಿಡ್ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಎಪ್ರಿಲ್ 30ರಂದು ನಿಧನರಾದರು. 

ಕಾನು ಪ್ರಿಯಾ ಅವರು ನಡೆಸಿಕೊಡುತ್ತಿದ್ದ ಕರ್ಮಭೂಮಿ ಕಾರ್ಯಕ್ರಮವು ಯುವ ನಾಯಕತ್ವದತ್ತ ಹೆಚ್ಚು ಒತ್ತು ನೀಡುತ್ತಿತ್ತು. 

ಕಾನು ಪ್ರಿಯಾ ಅವರು ನಟಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು, 80ಕ್ಕೂ ಅಧಿಕ ಧಾರವಾಹಿಗಳು ಹಾಗೂ 50 ಟೆಲಿ ಫಿಲ್ಮ್ ಗಳಲ್ಲಿ ನಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News