ಕೋವಿಡ್ ನಿಯಮ ಉಲ್ಲಂಘನೆ: 10 ಪ್ರಕರಣಗಳು ದಾಖಲು
Update: 2021-05-02 21:57 IST
ಉಡುಪಿ, ಮೇ 2: ಲಾಕ್‌ಡೌನ್‌ನಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ 40 ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಕೋವಿಡ್ ನಿಯಮ ಉಲ್ಲಂಘಿಸಿರುವ ಕುರಿತು 10 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಉಡುಪಿ ಉಪವಿಭಾಗದಲ್ಲಿ 6 ದ್ವಿಚಕ್ರ ವಾಹನ, ಕಾರ್ಕಳದಲ್ಲಿ 1, ಕುಂದಾಪುರ 30 ದ್ವಿಚಕ್ರ ವಾಹನ ಮತ್ತು ಮೂರು ಕಾರನ್ನು ವಶಪಡಿಸಿಕೊಳ್ಳ ಲಾಗಿದೆ. ಅದೇ ರೀತಿ ಉಡುಪಿಯಲ್ಲಿ ಮೂರು, ಕಾರ್ಕಳ ಒಂದು ಮತ್ತು ಕುಂದಾಪುರದಲ್ಲಿ ಆರು ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖ ಲಾಗಿವೆ.
ಪರಿಷ್ಕೃತ ಮಾರ್ಗಸೂಚಿಯಂತೆ ಇಂದು ಉಡುಪಿ ನಗರದಲ್ಲಿ ಮಧ್ಯಾಹ್ನ 12ಗಂಟೆಯವರೆಗೆ ದಿನಸಿ ಅಂಗಡಿಗಳು, ಸೂಪರ್ ಮಾರ್ಕೆಟ್‌ಗಳು ತೆರೆದಿ ದ್ದವು. ಹೊಟೇಲ್‌ಗಳಲ್ಲಿ ಸಂಜೆಯವರೆಗೆ ಪಾರ್ಸೆಲ್ ನೀಡಲು ಅವಕಾಶ ಕಲ್ಪಿಸ ಲಾಗಿತ್ತು. ತರಕಾರಿ, ಹಾಲಿಗೆ ಸಂಜೆ 6ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿ ದ್ದರೂ ಜನ ಸಂಚಾರ ಇಲ್ಲದೆ ತರಕಾರಿ ಅಂಗಡಿಯವರು ಮಧ್ಯಾಹ್ನ ವೇಳೆಯೇ ಬಂದ್ ಮಾಡಿರುವುದು ಕಂಡುಬಂದವು.