ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ: ಉಡುಪಿ ಡಿಎಚ್‌ಓ
Update: 2021-05-02 21:57 IST
ಉಡುಪಿ, ಮೇ 2: ಕೋವಿಡ್ ಲಸಿಕೆಗೆ ಸಂಬಂಧಪಟ್ಟಂತೆ ಸರಕಾರದಿಂದ ಪೂರೈಕೆಯಾಗುವ ಕೋವಿಶೀಲ್ಡ್ ಲಸಿಕೆಯನ್ನು ಆದ್ಯತೆ ಮೇರೆಗೆ ಎರಡನೇ ಡೋಸ್ ಪಡೆಯುವರಿಗೆ ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ ತಿಳಿಸಿದ್ದಾರೆ.
ಎರಡು ಬಾರಿ ಡೋಸ್ ಪಡೆಯುವ ಮೂಲಕ ವ್ಯಾಕ್ಸಿನ್ ಸಂಪೂರ್ಣ ಗೊಳಿಸಿದರೆ ಮಾತ್ರ ದೇಹಕ್ಕೆ ರೋಗ ನಿರೋಧಕ ಶಕ್ತಿ ದೊರೆಯಲು ಸಾಧ್ಯ ವಾಗುತ್ತದೆ. ಆದುದರಿಂದ ಮೊದಲ ಡೋಸ್ ಪಡೆಯುವವರಿಗಿಂತ ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ ನೀಡಲಾಗುವುದು. ಆದುದರಿಂದ ಮೊದಲ ಡೋಸ್ ಪಡೆಯುವವರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಮುಂದೆ ಎಲ್ಲರಿಗೂ ಲಸಿಕೆಯನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.