ಕಡಬ : ವಿದ್ಯುತ್ ಅಘಾತಕ್ಕೆ ಯುವಕ ಬಲಿ
Update: 2021-05-02 23:13 IST
ಕಡಬ : ವಿದ್ಯುತ್ ಅವಘಡದಿಂದಾಗಿ ಮೊಬೈಲ್ ಟವರ್ ಮೈಂಟೇನರ್ ಓರ್ವರು ಮೃತಪಟ್ಟ ಘಟನೆ ರವಿವಾರ ರಾತ್ರಿ ಆಲಂಕಾರಿನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಉಪ್ಪಿನಂಗಡಿ ನಿವಾಸಿ ಶ್ಯಾಮ್ ಎಂದು ಗುರುತಿಸಲಾಗಿದೆ.
ಶ್ಯಾಮ್ ಅವರು ಆಲಂಕಾರು ಸಮೀಪದ ನೆಕ್ಕರೆ ಎಂಬಲ್ಲಿರುವ ಏರ್ ಟೆಲ್ ಕಂಪೆನಿಯ ಟವರ್ ಮೈಂಟೈನರ್ ಆಗಿದ್ದು, ರವಿವಾರ ರಾತ್ರಿ ವೇಳೆ ವಿದ್ಯುತ್ ಅವಘಡದಿಂದಾಗಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕಡಬ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.