×
Ad

ಕರ್ಫ್ಯೂ ಉಲ್ಲಂಘನೆ ಆರೋಪ : ಉಡುಪಿ ಜಿಲ್ಲೆಯಲ್ಲಿ 69 ವಾಹನಗಳು ವಶ, 6 ಪ್ರಕರಣಗಳು ದಾಖಲು

Update: 2021-05-03 21:20 IST

ಉಡುಪಿ, ಮೇ 3: ಜಿಲ್ಲೆಯಲ್ಲಿ ವಿಧಿಸಲಾಗಿರುವ ಕರ್ಫ್ಯೂ ಸಂದರ್ಭ ಅನಗತ್ಯವಾಗಿ ತಿರುಗಾಡುತ್ತಿದ್ದ ಆರೋಪದಲ್ಲಿ ಒಟ್ಟು 69 ವಾಹನಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಕೋವಿಡ್ ನಿಯಮ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿ ಒಟ್ಟು 6 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಉಡುಪಿ ಉಪವಿಭಾಗದಲ್ಲಿ 21 ದ್ವಿಚಕ್ರ ವಾಹನ, 3 ಕಾರು, ಕಾರ್ಕಳದಲ್ಲಿ 2 ದ್ವಿಚಕ್ರ ವಾಹನ, ಕುಂದಾಪುರ 42 ದ್ವಿಚಕ್ರ ವಾಹನ ಮತ್ತು ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಉಡುಪಿಯಲ್ಲಿ ನಾಲ್ಕು, ಕಾರ್ಕಳ ದಲ್ಲಿ ಎರಡು ಪ್ರರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ ಬಿ.ಪಿ. ನೇತೃತ್ವದಲ್ಲಿ ಕೋಟ ಠಾಣಾ ವ್ಯಾಪ್ತಿಯಲ್ಲಿ ಅನಗತ್ಯ ಓಡಾಟ ಮಾಡುವವರಿಗೆ, ಮಾಸ್ಕ್ ಇಲ್ಲದವರಿಗೆ, ಹೆಲ್ಮೆಟ್ ದರಿಸದವರಿಗೆ ಖಾಕಿ ಪಡೆ ಬಿಸಿ ಮುಟ್ಟಿಸಿ ಹಲವರಿಗೆ ದಂಡ ವಿಧಿಸಿ ಕೆಲವು ಗಾಡಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೆ ಅರ್ಧ ಬಾಗಿಲು ತೆರೆದು ವ್ಯವರಿಸುತಿದ್ದ ಅಂಗಡಿಗೆ ದಾಳಿ ಮಾಡಿ ಮಾಲಕ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News